ಶೋಭಾ ಕರಂದ್ಲಾಜೆ ಹುಟ್ಟುಹಬ್ಬ…ಮಾವುತರು ಕಾವಾಡಿಗಳೊಂದಿಗೆ ಆಚರಣೆ…
- TV10 Kannada Exclusive
- October 23, 2023
- No Comment
- 185
ಮೈಸೂರು,ಅ23,Tv10 ಕನ್ನಡ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹುಟ್ಟುಹಬ್ಬವನ್ನ ಗಜಪಡೆಯೊಂದಿಗೆ ಮೈಸೂರಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗರ ಜೊತೆ ಆಚರಿಸಿಕೊಂಡು ಸಂಭ್ರಮಿಸಿದರು. ಕಾವಾಡಿಗರು ಮತ್ತು ಮಾವುತರಿಗೆ ವಿಶೇಷ ಉಪಹಾರ ಬಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಾವುತರು ಮತ್ತು ಕಾವಾಡಿಗಳಿಗಾಗಿ ವಿಶೇಷ ಉಪಾಹಾರ ಸಿದ್ಧಪಡಿಸಲಾಗಿತ್ತು,ಜೊತೆಗೆ ಕೇಕ್ ಕತ್ತರಿಸುವ ಮೂಲಕ ಶೋಭಾ ಕರಂದ್ಲಾಜೆ ಜನುಮದಿನ ಆಚರಿಸಿಕೊಂಡರು.
ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳಿಯ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರದ್ಲಾಂಜೆ,ನಾನು ರಾಜ್ಯಸಚಿವೆಯಾಗಿದ್ದಾಗ ದಸರಾ ಸಂದರ್ಭದಲ್ಲಿ ಮಾವುತರು,ಕಾವಾಡಿಗರೊಂದಿಗೆ ಉಪಹಾರ ಸೇವಿಸಿದ್ದೆ ಇಂದು ಜನ್ಮದಿನವನ್ನೂ ಅವರೊಂದಿಗೇ ಆಚರಿಸಿದ್ದೇನೆ ಇದು ನನಗೆ ಸಂತಸದ ವಿಷಯ ಎಂದು ಹೇಳಿದರು.ನೀವು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದೀರಂತೆ ಎಂಬ ಮಾಧ್ಯಮದವರು ಪ್ರಶ್ನೆಗೆ ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ ಎಂದು ಹೇಳಿದರು.ನಾನು ಅಲ್ಲಿಯೇ ಇರುತ್ತೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಒಳ್ಳೆ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ.ಯಾವ ವರಿಷ್ಠರಿಂದಲೂ ನನಗೆ ಯಾವ ಸೂಚನೆಗಳು ಬಂದಿಲ್ಲ ಇವೆಲ್ಲ ಸುದ್ದಿ ಹೇಗೆ ಬರುತ್ತಿವೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದರು…