ದಸರಾ 2023: ಜಂಬೂಸವಾರಿಗೆ ಬಿಗಿ ಪೊಲೀಸ್ ಭದ್ರತೆ…
- TV10 Kannada Exclusive
- October 23, 2023
- No Comment
- 151
ದಸರಾ 2023: ಜಂಬೂಸವಾರಿಗೆ ಬಿಗಿ ಪೊಲೀಸ್ ಭದ್ರತೆ…
ಮೈಸೂರು,ಅ23,Tv10 ಕನ್ನಡ
ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಯಶಸ್ವಿಗಾಗಿ ಹಾಗೂ ಮುನ್ನೆಚ್ಚರಿಕೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಲಕ್ಷಾಂತರ ಮಂದಿ ಸೇರುವ ಹಿನ್ನಲೆ ಜಂಬೂಸವಾರಿಗೆ ಖಾಕಿ ಸರ್ಪಗಾವಲು ಏರ್ಪಡಿಸಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
6 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಈ ಬಾರಿ ಜಂಬೂಸವಾರಿಗಾಗಿ ನಿಯೋಜಿಸಲಾಗಿದೆ. ಒಬ್ಬರು ಡಿ ಐ ಜಿ, ಎಂಟು ಮಂದಿ ಎಸ್ ಪಿ ಗಳು, 10 ಅಡಿಷನಲ್ ಎಸ್ಪಿ ಗಳು, ಡಿವೈಎಸ್ಪಿ, ಇನ್ಸ್‌ಪೆಕ್ಟರ್ ಸೇರಿ ಹೊರಗಿನಿಂದ 4,500 ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಈ ಬಾರಿ ಶಕ್ತಿ ಯೋಜನೆಯಿಂದಾಗಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ಅತಿ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ.ಹೀಗಾಗಿ ಹೆಚ್ಚು ಭದ್ರತೆ ಒದಗಿಸಲಾಗಿದೆ.
ನಗರದಾದ್ಯಂತ ಸಣ್ಣ,ಸಣ್ಣ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ನಗರದಲ್ಲಿರುವ ಎಲ್ಲಾ ಮಾಲ್ ಗಳು, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧಡೆ ಭದ್ರತೆ ಹೆಚ್ಚಿಸಲಾಗಿದೆ.
ನಗರದ ಹೋಟೆಲುಗಳಲ್ಲಿ ತಂಗಿರುವ ಪ್ರವಾಸಿಗರ ಬಗ್ಗೆ ಹೆಚ್ಚು ನಿಗಾವಹಿಸಲಾಗಿದೆ. ಸಿ ಸಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ…