ನೂಕುನುಗ್ಗಲಿನಲ್ಲಿ ಮಹಿಳೆ ಅಸ್ವಸ್ಥ…ಮಾನವೀಯತೆ ಮೆರೆದ ಪೊಲೀಸರು…
- TV10 Kannada Exclusive
- October 25, 2023
- No Comment
- 192
ನೂಕುನುಗ್ಗಲಿನಲ್ಲಿ ಮಹಿಳೆ ಅಸ್ವಸ್ಥ…ಮಾನವೀಯತೆ ಮೆರೆದ ಪೊಲೀಸರು…

ಮೈಸೂರು,ಅ25,Tv10 ಕನ್ನಡ
ಅದ್ದೂರಿ ಜಂಬೂಸವಾರಿ ಕಣ್ತುಂಬಿಕೊಳ್ಳಲು ನಾಡಿನ ವಿವಿದ ಮೂಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು.ಮೆರವಣಿಗೆ ಶುರುವಾಗುತ್ತಿದ್ದಂತೆಯೇ ಸೌಮ್ಯವಾಗಿ ಕುಳಿತಿದ್ದ ಜನ ಹುಚ್ಚೆದ್ದು ಕುಣಿದರು.ಈ ವೇಳೆ ನೂಕುನುಗ್ಗಲಿಗೆ ಕಾರಣವಾಯಿತು.ಕೆಲವೆಡೆ ಪೊಲೀಸರು ಜನರ ಮೂಕುನುಗ್ಗಲನ್ನ ನಿಯಂತ್ರಿಸಲು ಹರಸಾಹಸ ಪಟ್ಟರು.ಕೆ.ಆರ್.ವೃತ್ತದನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರು ಸಿಲುಕಿ ಅಸ್ವಸ್ಥರಾದರು.ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿಗಳು ಆಕೆಯ ನೆರವಿಗೆ ಧಾವಿಸಿ ಮಾನವೀಯತೆ ಮೆರೆದರು.ಮತ್ತೊಂದೆಡೆ ಮಗುವಿನ ನೆರವಿಗೆ ಪೊಲೀಸ್ ಸಿಬ್ಬಂದಿ ಬಂದರು…