ಪಟಾಕಿ ಹಬ್ಬ…ನಿಯಮಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿಗಳ ಆದೇಶ
- TV10 Kannada Exclusive
- November 9, 2023
- No Comment
- 391

ಮೈಸೂರು,ನ9,Tv10 ಕನ್ನಡ
ಪಟಾಕಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ.ಪಟಾಕಿ ಬಳಕೆ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ಕೆಲವು ನಿಭಂಧನೆಗಳನ್ನ ಜಾರಿಗೊಳಿಸಿದೆ.ಸಾರ್ವಜನಿಕರ ಹಿತದೃಷ್ಟಿಯಿಂದ ಜಾರಿಗೆ ತರಲಾದ ನಿಯಮಗಳನ್ನ ಪಾಲಿಸದಿದ್ದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
1.ಹಸಿರು ಪಟಾಕಿ ಹೊರತು ಪಡಿಸಿ ಇನ್ಯಾವುದೇ ಪಟಾಕಿಗಳ ಬಳಕೆ ಹಾಗೂ ಮಾರಾಟ ನಿಷೇಧಿಸಲಾಗಿದೆ
2.ಹಸಿರು ಪಟಾಕಿಗಳ ಮೇಲೆ ಚಿಹ್ನೆ ಇರುತ್ತದೆ ಮತ್ತು ಕ್ಯೂ ಆರ್ ಕೋಡ್ ಇರುತ್ತದೆ.ಚಿಹ್ನೆ ಇಲ್ಲದ ಯಾವುದೇ ಪಟಾಕಿಗಳನ್ನ ಮಾರಾಟ ಮಾಡಿದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
3.ರಾತ್ರಿ 8 ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಲಾಗಿರುತ್ತದೆ.
4.ನಿಷ್ಯಬ್ಧವಲಯಗಳ ಬಳಿ(ಆಸ್ಪತ್ರೆ,ದೇವಸ್ಥಾನ,ಮಂದಿರ,ಶಾಲೆ) ಶಬ್ಧ ಉಂಟುಮಾಡುವ ಪಟಾಕಿ ಸಿಡಿಸಲು ಅವಕಾಶ ಇರುವುದಿಲ್ಲ.
ಈ ಎಲ್ಲಾ ನಿಯಮಗಳನ್ನ ಸಾರ್ವಜನಿಕರು ಅನುಸರಿಸಯವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ…