ರಾಮ ಭಕ್ತರನ್ನ ದಾರಿ ತಪ್ಪಿಸುತ್ತಿರುವ ಕಿಲಾಡಿಗಳು…ದೇವಾಲಯ ಪ್ರವೇಶಕ್ಕೆ ಸುಳ್ಳು ಮಾಹಿತಿ ನೀಡುವ ಚಾಲಾಕಿ ಸಿಬ್ಬಂದಿಗಳು…

ರಾಮನಗರ,ನ9,Tv10 ಕನ್ನಡ

ರಾಮನಗರದ ರಾಮದೇವರ ಬೆಟ್ಟಕ್ಕೆ ತೆರಳುವ ಭಕ್ತರೇ ಹುಷಾರ್.ಸರಿಯಾದ ಸಮಯ ತಿಳಿದುಕೊಂಡು ಬೆಟ್ಟಕ್ಕೆ ಹೋಗಿ ಇಲ್ಲಾಂದ್ರೆ ಪ್ರವೇಶ ಧ್ವಾರದಲ್ಲಿರುವ ಅರಣ್ಯ ಇಲಾಖೆ ವತಿಯಿಂದ ಶುಲ್ಕ ವಸೂಲಿ ಮಾಡುವ ಸಿಬ್ಬಂದಿಗಳು ಶುಲ್ಕಕ್ಕಾಗಿ ಸುಳ್ಳು ಮಾಹಿತಿ ನೀಡಿ ಹಣ ವಸೂಲಿ ಮಾಡ್ತಾರೆ.ರಾಮನ ದರುಶನ ಪಡೆಯುವ ಹಂಬಲದಿಂದ 400 ಮೆಟ್ಟಿಲು ಹತ್ತಿ ಹೋಗುವ ಭಕ್ತರು ಮುಚ್ಚಿದ ಬಾಗಿಲನ್ನ ನೋಡಿ ನಿರಾಸೆಯಿಂದ ವಾಪಸ್ ಹಿಂದಿರುಗುತ್ತಾರೆ.ಕೇವಲ ಪ್ರವೇಶ ಶುಲ್ಕ ವಸೂಲಿಗಾಗಿ ಭಕ್ತರನ್ನ ಸಿಬ್ಬಂದಿಗಳು ದಾರಿ ತಪ್ಪಿಸುತ್ತಿದ್ದಾರೆ.

ಇಂದು ಸಂಜೆ ಸುಮಾರು 4.10 ಸಮಯದಲ್ಲಿ ಮೈಸೂರಿನ ಕುಟುಂಬವೊಂದು ರಾಮದೇವರ ಬೆಟ್ಟಕ್ಕೆ ತೆರಳಿದೆ.ಪ್ರವೇಶ ಧ್ವಾರದಲ್ಲಿ timings ಕೇಳಿದಾಗ 5 ಗಂಟೆ ವರೆಗೂ ದೇವಾಲಯ ತೆರೆದಿರುತ್ತದೆ ಎಂದು ತಿಳಿಸಿ ಪ್ರವೇಶ ಶುಲ್ಕ ವಸೂಲಿ ಮಾಡಿದ್ದಾರೆ.400 ಮೆಟ್ಟಿಲು ಹತ್ತಿಹೋದ ಕುಟುಂಬಕ್ಕೆ ದೇವಾಲಯದ ಮುಚ್ಚಿದ ಬಾಗಿಲು ದರುಶನವಾಗಿ ನಿರಾಸೆಯಿಂದ ಇಳಿದು ಬಂದಿದೆ.ಇಲ್ಲಿ ಕೇವಲ ಶನಿವಾರ,ಭಾನುವಾರ ಮಾತ್ರ ಸಂಜೆ 5 ರವರೆಗೆ ತೆರದಿರುತ್ತದೆ.ಉಳಿದ ದಿನಗಳಲ್ಲಿ ಮಧ್ಯಾಹ್ನ 2 ಗಂಟೆಗೆ ಕ್ಲೋಸ್ ಆಗುತ್ತೆ.400 ಮೆಟ್ಟಿಲು ಹತ್ತಿ ಹೋದ ನಂತರ timings ಗೊತ್ತಾಗುತ್ತದೆ.ಕೇವಲ ಪ್ರವೇಶ ಶುಲ್ಕ ವಸೂಲಿ ಮಾಡಲು ಪ್ರವೇಶ ಧ್ವಾರದಲ್ಲಿ ಸಿಬ್ಬಂದಿಗಳು ಸುಳ್ಳು ಮಾಹಿತಿ ನೀಡಿ ಹಣ ವಸೂಲಿ ಮಾಡಿ ಕಳುಹಿಸುತ್ತಾರೆ.ಈ ಸುಳ್ಳು ಮಾಹಿತಿ ಬಗ್ಗೆ ಪ್ರವೇಶ ಧ್ವಾರದ ಸಿಬ್ಬಂದಿಗಳನ್ನ ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಡುತ್ತಾರೆ.ದೇವಾಲಯದ ಆಡಳಿತ ಸಿಬ್ಬಂದಿಗಳನ್ನ ಪ್ರಶ್ನಿಸಿದರೆ ನಮಗೂ ಅರಣ್ಯ ಇಲಾಖೆಗೂ ಸಂಭಂಧ ಇಲ್ಲ ಅನ್ನುತ್ತಾರೆ.ಪ್ರವೇಶ ಧ್ವಾರದಲ್ಲಿ ಅರಣ್ಯ ಇಲಾಖೆಗೂ ದೇವಾಲಯಕ್ಕೂ ಯಾವುದೇ ಸಂಭಂಧ ಇಲ್ಲ ಎಂಬ ಮಾಹಿತಿ ಬಗ್ಗೆ ಯಾರೂ ಹೇಳುವುದಿಲ್ಲ.ಅಲ್ಲದೆ ಒಂದು ಸೂಚನಾ ಫಲಕವೂ ಇರುವುದಿಲ್ಲ.400 ಮೆಟ್ಟಿಲು ಹತ್ತಲು ಪ್ರವೇಶ ಶುಲ್ಕ ಅನ್ನೋ ಬೇಕಾಬಿಟ್ಟಿ ಉತ್ತರವೂ ಸಹ ಗೇಟ್ ಕಾಯುವ ಸಿಬ್ಬಂದಿಗಳಿಂದ ಬರುತ್ತದೆ.ದೇವಾಲಯ ಆಡಳಿತ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವಿನ ತಾರತಮ್ಯ ಲೋಪದಿಂದ ರಾಮನ ದರುಶನಕ್ಕೆ ಬರುವ ಭಕ್ತರು ಪರಿಪಾಟಲು ಅನುಭವಿಸುತ್ತಿದ್ದಾರೆ.ಈ ಬಗ್ಗೆ ಆರ್.ಎಫ್.ಓ.ದಿನೇಶ್ ರವರನ್ಮ ಪ್ರಶ್ನಿಸಿದರೆ…ಓ ಹೀಗಾಯ್ತಾ…? ಎಂಬ ಉತ್ತರ ಬಂದಿದೆ.ಕೇವಲ ಮರಗಿಡಗಳು ಹಾಗೂ ಮೂರು ನಾಮ ಹೊಡೆದ ಕಲ್ಲು ,ಬಂಡೆಗಳನ್ನ ವೀಕ್ಷಿಸಲು ತಲಾ 25 ರೂ ವಸೂಲಿ ಮಾಡುತ್ತಿರುವ ಅರಣ್ಯ ಇಲಾಖೆಗೆ ಬುದ್ದಿ ಹೇಳುವರಿಲ್ಲವೇ..? ಯಾವ ಪುರುಷಾರ್ಥಕ್ಕಾಗಿ ಅರಣ್ಯ ಇಲಾಖೆ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದೆಯೋ ಗೊತ್ತಿಲ್ಲ.ರಾಮ ಭಕ್ತರೇ ರಾಮನಗರದ ರಾಮದೇವರ ಬೆಟ್ಟಕ್ಕೆ ತೆರಳುವ ಮುನ್ನ ಪ್ರವೇಶ ಧ್ವಾರದಲ್ಲಿರುವ ಚಾಲಾಕಿಗಳ ಕಿಲಾಡಿತನವನ್ನ ತಿಳಿದುಕೊಳ್ಳಿ.ಇಲ್ಲದಿದ್ದಲ್ಲಿ 400 ಮೆಟ್ಟಿಲು ಹತ್ತಿ,ರಾಮನ ದರುಶನವಾಗದೆ ಉಸ್ಸಪ್ಪಾ ಎಂದು ಹಿಡಿಶಾಪ ಹಾಕುವುದು ಗ್ಯಾರೆಂಟಿ.ಅದೇನೇ ಇರಲಿ ನೂರಾರು ಮೈಲುಗಳಿಂದ ರಾಮನ ದರುಶನಕ್ಕೆ ಬರುವ ಭಕ್ತರಿಗೆ ದಾರಿ ತಪ್ಪಿಸುವ ಈ ಖದೀಮರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬುದ್ದಿ ಹೇಳಲಿ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *