ಅನ್ನಭಾಗ್ಯ ಅಕ್ಕಿ ದುರುಪಯೋಗ ಆರೋಪ…ಅಪ್ರಾಪ್ತರ ಬಳಕೆ…
- TV10 Kannada Exclusive
- November 14, 2023
- No Comment
- 215

ಮೈಸೂರು,ನ14,Tv10 ಕನ್ನಡ
ಸರ್ಕಾರದ ಅನ್ನಭಾಗ್ಯ ಯೋಜನೆ ದುರುಪಯೋಗವಾಗುತ್ತಿದೆ.ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಬೆಳಕಿಗೆ ಬಂದಿದೆ.
ದಂಧೆಕೋರರು ಮನೆ ಮನೆಗೆ ತೆರಳಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ಅಪ್ರಾಪ್ತರನ್ನ ಬಳಸಿಕೊಂಡು ದಂಧೆ ನಡೆಸುತ್ತಿದ್ದಾರೆ.
15 ರಿಂದ 16 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಖರೀದಿ ಮಾಡಲಾಗುತ್ತಿದೆ.
50 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾ ಸೇರಿ ಹಲವು ಕಡೆ ದಂಧೆ ನಡೆಯುತ್ತಿದೆ.
ಇದುವರೆಗೂ ಹಲವು ವಾಹನಗಳನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಆದರೂ ಅನ್ನಭಾಗ್ಯ ದಂಧೆಗೆ ಕಡಿವಾಣ ಬಿದ್ದಿಲ್ಲ.ಆಟೋ ದ್ವಿಚಕ್ರ ವಾಹನದಲ್ಲಿ ಮನೆ ಮನೆಗೆ ತೆರಳುತ್ತಿರುವ ಮಕ್ಕಳು ಅಕ್ಕಿ ಖರೀದಿಸುತ್ತಿದ್ದಾರೆ. ಮಕ್ಕಳ ಮೂಲಕ
ಅಕ್ಕಿ ಖರೀದಿಸಿ ದಂಧೆಕೋರರಿಗೆ ರವಾನಿಸಲಾಗುತ್ತಿದೆ.
ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ದಂಧೆಕೋರರ ಹಾವಳಿಗೆ ಕಡಿವಾಣ ಬೀಳಬೇಕಿದೆ.
ಎರಡು ತಿಂಗಳ ಹಿಂದೆ ಆಟೋದಲ್ಲಿ ಮಕ್ಕಳು ಅನ್ನಭಾಗ್ಯ ಅಕ್ಕಿ ಸಾಗಾಣೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಅಪ್ರಾಪ್ತರೆಂಬ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ.ಮಕ್ಕಳ್ನ ಹಿಡಿದಿದ್ದ ಸಾರ್ವಜನಿಕರು
ವಾರ್ನ್ ಮಾಡಿ ಕಳುಹಿಸಿದ್ದರು.ಹೀಗಿದ್ದೂ ಅನ್ನಭಾಗ್ಯ ಅಕ್ಕಿ ರಾಜಾರೋಷವಾಗಿ ದಂಧೆಕೋರರ ಕೈ ಸೇರುತ್ತಿದೆ…