ಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ…ಹರಿದುಬಂದ ಭಕ್ತಸಾಗರ…
- TV10 Kannada Exclusive
- November 14, 2023
- No Comment
- 150

ಕೊಳ್ಳೆಗಾಲ,ನ14,Tv10 ಕನ್ನಡ

ಮಲೈ ಮಹದೇಶ್ವರ ಬೆಟ್ಟದಲ್ಲಿ ಇಂದು ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿತು.ಮಾದಪ್ಪನ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಭಕ್ತರು
ಸಾಗರೋಪಾದಿಯಲ್ಲಿ ಹರಿದು ಬಂದರು.ಉಘೇ ಉಘೇ ಮಾದಪ್ಪ ಎಂಬ ಹರ್ಷೋದ್ಘಾರದೊಂದಿಗೆ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ತಲ್ಲೀನರಾದರು.ದೀಪಾವಳಿ ಹಬ್ಬವಾದ ಇಂದು ನಡೆದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಲಕ್ಷಾಂತರ ಭಕ್ತರು ಮಾದಪ್ಪನ ದರುಶನ ಪಡೆದು ಪುನೀತರಾದರು…
