ಎಂಪಿ ಮಗನಿಂದ ಮಹಿಳೆಗೆ ವಂಚನೆ ಪ್ರಕರಣ…ಮೈಸೂರಿನಲ್ಲಿ ಪ್ರತಿ ದೂರು…
- Crime
- November 17, 2023
- No Comment
- 387

ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ಮಹಿಳೆಯೊಬ್ಬರು ಎಂ.ಪಿ.ಮಗನ ವಿರುದ್ದ ಬೆಂಗಳೂರಿನಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಭಂಧಿಸಿದಂತೆ ಮೈಸೂರಿನ
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿಯಾಗಿ ನೊಂದ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ.
ಪ್ರೊ.ರಂಗನಾಥ್ ಎಂಬುವರು ದೂರು ದಾಖಲಿಸಿದ್ದಾರೆ.
ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಪರಿಶಿಷ್ಟ ಪಂಗಡದ ನಾಯಕ ಜನಾಂಗಕ್ಕೆ ಸೇರಿದ್ದೇನೆ.
ನನ್ನ ಸ್ನೇಹಿತ ಕಲ್ಲೇಶ್ ರವರಿಂದ ದೇವಿಕ.ಬಿ. ಮತ್ತು ಶ್ರೀನಿವಾಸ ರವರು ಪರಿಚಯವಾಗಿದ್ದರು.
ದೇವಿಕಾ ನನ್ನನ್ನು 2-3 ಬಾರಿ ಭೇಟಿಯಾಗಿದ್ದು, ಆ ಸಮಯದಲ್ಲಿ ನನ್ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿರುತ್ತಾರೆ.
ಆಗ ನಾನು ಇದಕ್ಕೆ ವಿರೋಧ ವ್ಯಕ್ತ ಪಡಿಸಿರುತ್ತೇನೆ.
ಹೀಗಿರುವಾಗೆ 2023 ಅಕ್ಟೋಬರ್ ತಿಂಗಳ ಮೊದಲನೆ ವಾರದ ಒಂದು ದಿನ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ ಸುಮಾರು 02-30 ಗಂಟೆಯಿಂದ 04-00 ಗಂಟೆ ವರೆಗೂ ದೇವಿಕ ರವರು ನನ್ನನ್ನು ಭೇಟಿಯಾಗಿದ್ದರು.
ನನಗೆ ಅವಾಚ್ಯ ಶಬ್ದಗಳಿಂದ ಬೈದು, ತಾನು ಪರಿಶಿಷ್ಟ ವಿಶ್ವಕರ್ಮ ಜನಾಂಗದವಳಾಗಿದ್ದೇನೆ.ನಿನ್ನನ್ನು ಮದುವೆ ಮಾಡಿಕೊಳ್ಳಲು ಕೇಳಿದರೆ ಆಗುವುದಿಲ್ಲ ಎಂದು ಹೇಳುತ್ತಿಯಲ್ಲ.
ನಿನಗೆ ಎಷ್ಟು ಅಹಂಕಾರ ಎಂದು ನನ್ನ ಸ್ನೇಹಿತರ ಮತ್ತು ಸಾರ್ವಜನಿಕ ಮುಂದೆ ಜಾತಿನಿಂದನೆ ಮಾಡಿರುತ್ತಾರೆ.
ಈ ಮೊದಲು ದೇವಿಕಾ ನನ್ನ ಜೊತೆ ಇರುವ ಫೋಟೋಗಳನ್ನು ಮಾತುಕತೆಯ
ಸಂಭಾಷಣೆಯನ್ನು ನನ್ನ ಪತ್ನಿಗೆ ಕಳುಹಿಸಿ ತೊಂದರೆ ಕೊಡುತ್ತೇನೆ ಎಂದು ಬೆದರಿಕೆ, ಮಾನಸಿಕ ಹಿಂಸೆ ನೀಡಿರುತ್ತಾರೆ.
ನಂತರ ಪದೇ ಪದೇ ನನಗೆ ಕರೆಮಾಡಿ ಹಣಕ್ಕೆ ಭೇಡಿಕೆ ನೀಡಿದ್ದಾರೆ.ನಾನು ಇವರುಗಳ ಬೆದರಿಕೆಗೆ ಹೆದರಿ ನನ್ನ ಖಾತೆಯಿಂದ ಸುಮಾರು 32,500 ರೂ ದೇವಿಕ ರವರ ಖಾತೆಗೆ ವರ್ಗಾವಣೆ ಮಾಡಿರುತ್ತೇನೆ.
ಇದಾದ ಮೇಲೆ ನಾನು ಇವರ ಕಿರುಕುಳಕ್ಕೆ ಬೇಸತ್ತು ಹಣ ನೀಡಲು ಆಗುವುದಿಲ್ಲ ಎಂದು ಹೇಳಿದಾಗ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಕಳುಹಿಸಿದ್ದಳು.
ದಿನಾಂಕ 28-10-2023 ರಂದು ಮೈಸೂರಿಗೆ ಶ್ರೀನಿವಾಸ್ ಬಂದು ಮಧ್ಯಾಹ್ನ ಸುಮಾರು 02-00 ಗಂಟೆಯಿಂದ 02-30 ಗಂಟೆಯಲ್ಲಿ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಗ್ರೀನ್ ಫುಡ್ ಕೋರ್ಟ್ ಎಂಬ ಹೋಟೆಲ್‌ನಲ್ಲಿ ನನ್ನನ್ನು
ಭೇಟಿಮಾಡಿದ್ದರು.
ಆ ಸಮಯದಲ್ಲಿ ನನ್ನ ಜೊತೆ ನನ ಸ್ನೇಹಿತ ಶ್ಯಾಂ ಎಂಬುವರು ಇದ್ದರು.
ಶ್ರೀನಿವಾಸ್ 15 ಲಕ್ಷ ಹಣಕ್ಕೆ ಭೇಡಿಕೆ ಇಟ್ಟಿದ್ದರು.ನಾನು ಇದಕ್ಕೆ ನಿರಾ ಕರಿಸಿದಾಗ ಅವನು ನನಗೆ ಕೊಲೆ ಬೆದರಿಕೆ ಹಾಕಿ ಹಣ ಆದಷ್ಟು ಬೇಗ ಕೊಡಲು ಹೇಳಿ ಹೋಗಿರುತ್ತಾನೆ.
ನಂತರ ಶ್ರೀನಿವಾಸ್ ನನ್ನ ಸ್ನೇಹಿತ ಕಲ್ಲೇಶ್ ರವರ ಮೂಲಕ ಕನಿಷ್ಠ 10 ಲಕ್ಷ ಹಣವನ್ನು ನೀಡಿದರೆ ಇನ್ನು ಮುಂದೆ ದೇವಿಕ ಫೋನ್ ಮಾಡಿ ಕಿರುಕುಳ ನೀಡುವುದಿಲ್ಲ ಎಂದು ಹೇಳಿಸಿರುತ್ತಾನೆ.
ನಂತರ ನನ್ನ ಸ್ನೇಹಿತ ಕಲ್ಲೇಶ್ ನನ್ನ ಪರವಾಗಿ ದೇವಿಕ ರವರಿಗೆ ಕರೆಮಾಡಿ ಕೇಳಿದಾಗ ದೇವಿಕ ನಿರಂತರವಾಗಿ ಹಣದ ಬೇಡಿಕೆಯನ್ನು ಮಾಡಿರುತ್ತಾರೆ.
ನನ್ನನ್ನು ಬೆದರಿಸಿ ಹಣ ಪಡೆದು, ಇನ್ನು ಹೆಚ್ಚಿನ ಹಣಕ್ಕೆ ಭೇಡಿಕೆ ಜಾತಿನಿಂದನೆ ಮಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಕಿರುಕುಳ ನೀಡಿರುವ ದೇವಿಕ ಮತ್ತು ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳು ಬೇಕೆಂದು. ದೂರು ನೀಡಿರುವ ಮೇರೆಗೆ FIR ದಾಖಲಾಗಿದೆ…