ಬಿಸಿ ಸಾಂಬಾರ್ ಬಿದ್ದು ಅಡುಗೆ ಸಿಬ್ಬಂದಿಗೆ ಗಾಯ…ಚಾಮುಂಡಿಬೆಟ್ಟ ದಾಸೋಹ ಭವನದಲ್ಲಿ ಘಟನೆ…
- Crime
- November 16, 2023
- No Comment
- 326
ಮೈಸೂರು,ನ16,Tv10 ಕನ್ನಡ
ಬಿಸಿ ಸಾಂಬಾರ್ ಬಿದ್ದ ಪರಿಣಾಮ ಅಡುಗೆ ಸಿಬ್ಬಂದಿ ಗಾಯಗೊಂಡ ಘಟನೆ ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ನಡೆದಿದೆ.ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಚಿನ್ನಸ್ವಾಮಿ(29) ಗಾಯಗೊಂಡ ಅಡುಗೆ ಸಿಬ್ಬಂದಿ.ಲಿಫ್ಟ್ ನಲ್ಲಿ ಸಾಂಬಾರ್ ಇರುವ ಪಾತ್ರೆ ಸಾಗಿಸುವಾಗ ಘಟನೆ ನಡೆದಿದೆ.ಗಾಯಾಳು ಚಿನ್ನಸ್ವಾಮಿಗೆ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಚಿನ್ನಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಕೆ.ಆರ್.ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಗಾಯಗೊಂಡ ಚಿನ್ನಸ್ವಾಮಿಯನ್ನ ಕೆ.ಆರ್.ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಇಲ್ಲದೆ ಪರದಾಡಿದ್ದಾರೆ ಎನ್ನಲಾಗಿದೆ.ಚಾಮುಂಡಿ ಬೆಟ್ಟದಲ್ಲಿ ಅವಘಢಗಳು ನಡೆದಾಗ ತುರ್ತು ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇಲ್ಲ.ಕೋಟ್ಯಾಂತರ ರೂಪಾಯಿ ಆದಾಯ ನೀಡುವ ಚಾಮುಂಡಿ ಬೆಟ್ಟದಲ್ಲಿ ಕನಿಷ್ಠ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದಿರುವುದು ಶೋಚನೀಯ…