ನರಹಂತಕ ವ್ಯಾಘ್ರನಿಗೆ ಮತ್ತೊಂದು ಬಲಿ…ಹಾಡುಹಗಲೇ ದನಗಳನ್ನ ಮೇಯಿಸುತ್ತಿದ್ದ ಮಹಿಳೆ ಮೇಲೆ ದಾಳಿ…
- Crime
- November 24, 2023
- No Comment
- 229

ನಂಜನಗೂಡು,ನ24,Tv10 ಕನ್ನಡ

ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿಗೆ ದನಗಾಹಿ ಮಹಿಳೆ ಬಲಿಯಾಗಿದ್ದಾರೆ.ದನಗಳನ್ನ ಮೇಯಿಸುತ್ತಿದ್ದ ವೇಳೆ ಮಹಿಳೆಯನ್ನ ಬಲಿ ಪಡೆದು ಹೊತ್ತೊಯ್ದಿದೆ.
ಹಾಡುಹಗಲೇ ದಾಳಿ ನಡೆಸಿ ಮಹಿಳೆಯನ್ನ ಬಲಿ ಪಡೆದಿದೆ.
ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬುವರ ಪತ್ನಿ
ರತ್ನಮ್ಮ (50) ಮೃತ ದುರ್ದೈವಿ.ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ರತ್ನಮ್ಮಳ ಬಲಿ ಪಡೆದು ಮೃತದೇಹವನ್ನ ಅರಣ್ಯಪ್ರದೇಶಕ್ಕೆ ಹೊತ್ತೊಯ್ದಿದೆ.
ಸುಮಾರು ಒಂದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ವೀರಭದ್ರ ಭೋವಿ ಎಂಬುವರು ಬಲಿಯಾಗಿದ್ದರು.ನರಹಂತಕನನ್ನ ಸೆರೆಹಿಡಿಯಲು ಕೊಂಬಿಂಗ್ ಆಪರೇಷನ್ ಮಾಡಲಾಗಿತ್ತು.ವ್ಯಾಘ್ರ ಸೆರೆಸಿಕ್ಕಿರಲಿಲ್ಲ.ಇದೀಗ ಹುಲಿ ಮತ್ತೊಂದು ಬಲಿ ಪಡೆದಿದೆ.ಹೆಡಿಯಾಲ ಬಳ್ಳೂರು ಹುಂಡಿ ಮಹದೇವ ನಗರ ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ…