ಹುಣಸೂರು ಪೊಲೀಸ್ ಸಿಬ್ಬಂದಿಗೆ ಯೋಗಾಭ್ಯಾಸ…ಆರೋಗ್ಯಕ್ಕೆ ಒತ್ತು…
- TV10 Kannada Exclusive
- December 3, 2023
- No Comment
- 129
ಹುಣಸೂರು,ಡಿ3,Tv10 ಕನ್ನಡ
ಕಾನೂನು ಮತ್ತು ಸುವ್ಯವಸ್ಥೆಯಲ್ಲೇ ನಿರತರಾಗಿ ಸಾರ್ವಜನಿಕರ ಸೇವೆಗೆ ಮುಡುಪಾದ ಪೊಲೀಸರಿಗೆ ಆರೋಗ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮ ಹುಣಸೂರು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು.ಕರ್ತವ್ಯದ ವೇಳೆ ಸದಾ ಚಟುವಟಿಕೆಯಿಂದ ಇರಲು ಆರೋಗ್ಯ ಪ್ರಮುಖ ಸಾಧನ.ಈ ಹಿನ್ನಲೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಿನ್ನಲೆ ಹುಣಸೂರು ಠಾಣೆ ಪೊಲೀಸರಿಗೆ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹುಣಸೂರು ಪೊಲೀಸ್ ಠಾಣೆ ಮುಂಭಾಗ ಇಂದು ಮುಂಜಾನೆ ಸೇರಿದ ಹುಣಸೂರು ಖಾಕಿ ಪಡೆ ಯೋಗಾಸನದಲ್ಲಿ ನಿರತವಾಯಿತು.ನುರಿತ ಯೋಗಪಟುವಿನ ಮಾರ್ಗದರ್ಶನದಲ್ಲಿ ವಿವಿದ ಆಸನಗಳ ಅಭ್ಯಾಸ ಮಾಡುವ ಮೂಲಕ ಆರೋಗ್ಯ ಹಾಗೂ ಹೊಟ್ಟೆ ಬೊಜ್ಜು ಕರಗಿಸಲು ಮುಂದಾದರು.ಸುಮಾರು ಎರಡು ಗಂಟೆಗಳ ಕಾಲ ವಿವಿದ ಆಸನಗಳ ತರಬೇತಿ ಪಡೆದ ಸಿಬ್ಬಂದಿಗಳು ಯೋಗದ ಮಹತ್ವವನ್ನ ಅರಿತುಕೊಂಡರು.ಎಸ್ಪಿ ಸೀಮಾ ಲಾಟ್ಕರ್ ಹಾಗೂ ಅಡಿಷನಲ್ ಎಸ್ಪಿ ನಂದಿನಿ ರವರ ಸೂಚನೆಯಂತೆ ಯೋಗ ಕಾರ್ಯಕ್ರಮ ನಡೆಯಿತು…