ದಸರಾ ಆನೆ ಅರ್ಜುನ ಸಾವು…ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಘಟನೆ…8 ವರ್ಷ ಅಂಬಾರಿಯನ್ನ ಹೊತ್ತು ಗಮನ ಸೆಳೆದಿದ್ದ ಅರ್ಜುನ ಇನ್ನಿಲ್ಲ…
- TV10 Kannada Exclusive
- December 4, 2023
- No Comment
- 1906


ದಸರಾ ಆನೆ ಅರ್ಜುನ ಸಾವು…ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಘಟನೆ…8 ವರ್ಷ ಅಂಬಾರಿಯನ್ನ ಹೊತ್ತು ಗಮನ ಸೆಳೆದಿದ್ದ ಅರ್ಜುನ ಇನ್ನಿಲ್ಲ…
ಹಾಸನ,ಡಿ4,Tv10 ಕನ್ನಡ
ಎಂಟು ವರ್ಷಗಳ ಕಾಲ ನಾಡದೇವಿ ಚಾಮುಂಡೇಶ್ವರಿ ಇರುವ ಚಿನ್ನದ ಅಂಬಾರಿಯನ್ನ ಹೊತ್ತು ಸಾಗಿ ಲಕ್ಷಾಂತರ ಮಂದಿಯ ಕಣ್ಮಣಿಯಾಗಿದ್ದ ಅರ್ಜುನ ಸಾವನ್ನಪ್ಪಿದ್ದಾನೆ.ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೇಳೆ ಪುಂಡಾನೆ ತಿವಿದ ಪರಿಣಾಮ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.ಈ ಬಾರಿ ದಸರಾದಲ್ಲಿ ಭಾಗವಹಿಸಿತ್ತು.ಅಭಿಮನ್ಯು ತಂಡದಲ್ಲಿ ಭಾಗವಹಿಸಿ ಗಮನ ಸೆಳೆದಿತ್ತು.ಇಂದು ಕಾಡಾನೆ ಸೆರೆ ಹಿಡಿಯಲು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ…