ಹುಲಿ ದಾಳಿಗೆ ಎರಡು ಹಸುಗಳು ಬಲಿ…ಗ್ರಾಮಸ್ಥರಲ್ಲಿ ಭೀತಿ…
- TV10 Kannada Exclusive
- December 6, 2023
- No Comment
- 146
ಹುಣಸೂರು,ಡಿ6,Tv10 ಕನ್ನಡ
ಹುಲಿ ದಾಳಿಗೆ
ಎರಡು ಹಸುಗಳು ಬಲಿಯಾದ ಘಟನೆ
ಹುಣಸೂರು ತಾಲ್ಲೂಕು ನೇಗತ್ತೂರು ಗ್ರಾಮದಲ್ಲಿ ನಡೆದಿದರ.
ರೈತ ಆಕಾಶ್ ಎಂಬುವವರಿಗೆ ಸೇರಿದ ಹಸುಗಳು ಬಲಿಯಾಗಿವೆ.
ನಾಗರಾಹೊಳೆ ಅಭಯಾರಣ್ಯದಿಂದ ಬಂದಿರುವ ಹುಲಿ ದಾಳಿ ನಡೆಸಿದೆ.
ಗ್ರಾಮದ ಕೆರೆ ಬಳಿ ನೀರು ಕುಡಿಯುತ್ತಿದ್ದ ವೇಳೆ
ಪೊದೆಯಿಂದ ಬಂದ ಹುಲಿ ಏಕಾಏಕಿ ದಾಳಿ ಮಾಡಿದೆ.ಸಮೀಪದಲ್ಲೇ ಇದ್ದ ಆಕಾಶ್ ದೂರ ಸರಿದು ತಪ್ಪಿಸಿಕೊಂಡಿದ್ದಾರೆ.
ಘಟನೆಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.
ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ…