ಜಿಯೋ ಕೇಬಲ್ ಅಳವಡಿಕೆ ವೇಳೆ ನೀರಿನ ಪೈಪ್ ಗೆ ಹಾನಿ…ಗುತ್ತಿಗೆದಾರನಿಗೆ ಕಾರ್ಪೊರೇಟರ್ ಅಶ್ವಿನಿ ಕ್ಲಾಸ್…ಮಾತಿನ ಚಕಮಕಿ ವಿಡಿಯೋ ವೈರಲ್…
- TV10 Kannada Exclusive
- December 6, 2023
- No Comment
- 208
ಮೈಸೂರು,ಡಿ6,Tv10 ಕನ್ನಡ
ಜಿಯೋ ಕೇಬಲ್ ಎಳೆಯುವಾಗ ನೀರಿನ ಪೈಪ್ ಒಡೆದ ಹಿನ್ನೆಲೆ ಗುತ್ತಿಗೆದಾರನಿಗೆ ನಗರ ಪಸಲಿಕೆ ಸದಸ್ಯೆ ಅಶ್ವಿನಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರಿನ ಗಾಂಧಿನಗರದಲ್ಲಿ ಘಟನೆ ನಡೆದಿದೆ.
ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪ ಮಾಡಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದೆ.
ಪೈಪ್ ಸರಿ ಮಾಡಿಸಿಕೊಡುವುದಾಗಿ ಹೇಳಿದರು ಕೇಳದೆ ನಿಂದಿಸಿದ್ದಾರೆಂದು ಗುತ್ತಿಗೆದಾರ ಆರೋಪಿಸಿದ್ದಾರೆ.
20ನೇ ವಾರ್ಡ್ ಬಿಜೆಪಿ ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ವಿರುದ್ದ ಆರೋಪ
ಗುತ್ತಿಗೆದಾರ ಪ್ರದೀಪ್ ರವರು ಆರೋಪಿಸಿದ್ದಾರೆ.
ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದರು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ಈ ಬಗ್ಗೆ ಈಗ ಅಧಿಕಾರಿಗಳು ಪ್ರಶ್ನೆ ಮಾಡಬೇಕಿತ್ತು
ಆದರೆ ವಿನಾಕಾರಣ ಇವರು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿ
ಒಂದು ತಿಂಗಳ ಹಿಂದೆ ಹೊಸ ರಸ್ತೆಯಲ್ಲಿ ಹಳ್ಳ ತೆಗೆಯಲಾಗಿತ್ತು.
ಅನುಮತಿ ಪಡೆಯದೇ ಹಳ್ಳ ತೆಗೆಯಲಾಗಿತ್ತು.
ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
15 ದಿನವಾದರೂ ಪೈಪ್ ಸರಿ ಮಾಡಿರಲಿಲ್ಲ.
ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು.
ಈ ಹಿನ್ನೆಲೆ ಕೆಲಸ ನಿಲ್ಲಿಸಲಾಗಿತ್ತು.
ಈಗ ಪೈಪ್ ರೆಡಿ ಮಾಡಿಸದೆ ಕೆಲಸ ಮಾಡಲು ಬಂದಾಗ
ಈ ಬಗ್ಗೆ ಕೇಳಲಾಯ್ತು.
ಈ ವೇಳೆ ನಮಗೆ ಮೊದಲು ಅವರೇ ಅವಾಚ್ಯ ಶಬ್ಧದಿಂದ ನಿಂದಿಸಿದರು
ಅಶ್ವಿನಿ ಶರತ್ ಸ್ಪಷ್ಟನೆ ನೀಡಿದ್ದಾರೆ…