ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ಡೆಮಾಲಿಷ್…Tv10 ಇಂಪ್ಯಾಕ್ಟ್….
- TV10 Kannada Exclusive
- December 6, 2023
- No Comment
- 695




ಮೈಸೂರು,ಡಿ6,Tv10 ಕನ್ನಡ




ರಾಜಾಕಾಲುವೆ ಮೇಲೆ ತಲೆ ಎತ್ತಿ ನಿಂತಿದ್ದ ಬಂಬೂ ಬಿರಿಯಾನಿ ಹೋಟೆಲ್ ಡೆಮಾಲಿಷ್ ಆಗಿದೆ.Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಜೆಸಿಬಿ ತಂದು ತೆರುವುಗೊಳಿಸಿದ್ದಾರೆ.ಇದು Tv10 ವರದಿ ಫಲಶೃತಿಯಾಗಿದೆ. ಮೈಸೂರಿನ ಗೋಕುಲಂ ಬಡಾವಣೆ ವಾರ್ಡ್ ನಂ 6 ನಿರ್ಮಲಾ ಕಾನ್ವೆಂಟ್ ಬಳಿ ಹಾದು ಹೋಗಿರುವ ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಪ್ರಾರಂಭಕ್ಕೆ ಸಜ್ಜಾಗಿತ್ತು.ದುರಂತವೆಂದರೆ ರಾಜಾ ಕಾಲುವೆ ಮೇಲೆ ಹೋಟೆಲ್ ನಿರ್ಮಾಣವಾಗಿದ್ದರೂ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.ಈಗಾಗಲೇ ಕಟ್ಟಡದ ಮಾಲೀಕ ಬಾಡಿಗೆ ಫಿಕ್ಸ್ ಮಾಡಿ ಹೋಟೆಲ್ ನಡೆಸಲು ಅನುಮತಿ ನೀಡಿದ್ದ.ಇಷ್ಟೆಲ್ಲಾ ಬೆಳವಣಿಗೆ ಆದ್ರೂ ಯಾವುದೇ ಅಧಿಕಾರಿಗಳು ಇತ್ತ ಸುಳಿದಿರಲಿಲ್ಲ.ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಎಂದು ಎಚ್ಚರಿಸಲಾಗಿತ್ತು.ಕೂಡಲೇ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಹೋಟೆಲ್ ತೆರುವುಗೊಳಿಸಿದ್ದಾರೆ.ಇದು Tv10 ಕನ್ನಡ ವರದಿ ಎಫೆಕ್ಟ್…