RIE ಕಾಲೇಜು ವಿಧ್ಯಾರ್ಥಿ ಆತ್ಮಹತ್ಯೆ…ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ಸೂಸೈಡ್…
- Crime
- December 6, 2023
- No Comment
- 245
ಮೈಸೂರು,ಡಿ6,Tv10 ಕನ್ನಡ
ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ರೀಜನಲ್ ಇನ್ಸ್ಟ್ಯೂಟ್ ಕಾಲೇಜು ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಹೈದರಾಬಾದ್ ಮೂಲದ ಅಕ್ಷಜ್ (18) ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿ.ಮೊದಲ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಕ್ಷಜ್ ಆರ್.ಐ.ಇ.ಹಾಸ್ಟೆಲ್ ನಲ್ಲಿ ತಂಗಿದ್ದ.ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಕ್ಷಜ್ ತನ್ನ ಕೊಠಡಿಯಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ಕೈಗಳಿಗೆ ಶೂಲೇಸ್ ಕಟ್ಟಿಕೊಂಡು ಉಸಿರುಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಸಂಭಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..