ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ…ಗ್ರಾಮಸ್ಥರಲ್ಲಿ ಆತಂಕ…
- TV10 Kannada Exclusive
- December 7, 2023
- No Comment
- 212

ಕಬ್ಬು ಕಟಾವು ವೇಳೆ ಮೂರು ಚಿರತೆ ಮರಿಗಳು ಕಂಡುಬಂದಿದೆ.ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ತಾಯಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದ್ಯಾವಣ್ಣನಾಯಕ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಕಂಡುಬಂದಿದೆ.
ಚಿರತೆ ಮರಿಗಳನ್ನ ರಕ್ಷಣೆ ಮಾಡಿದ ರೈತರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಚಿರತೆ ಇರುವ ಹಿನ್ನೆಲೆ ಕಬ್ಬು ಕಟಾವು ಮಾಡಲು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ ಚಟುವಟಿಕೆಗೆ ತೆರಳಲು ಗ್ರಾಮಸ್ಥರು ಹೆದರುತ್ತಿದ್ದಾರೆ…