ಸರ್ಕಾರಿ ಕಚೇರಿಯಲ್ಲಿಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಸರ್ಕಾರಿ ಕಚೇರಿಗೆ ನುಗ್ಗಿ RI ಮೇಲೆ ಹಲ್ಲೆ…ಮೇಟಗಳ್ಳಿ ಠಾಣೆಯಲ್ಲಿ FIR ದಾಖಲು…
- Crime
- December 7, 2023
- No Comment
- 1382
ಮೈಸೂರು,ಡಿ7,Tv10 ಕನ್ನಡ

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಬಾಗಿಲ ಬಳಿ ನಿಂತು ಸಿಗರೇಟ್ ಸೇದುತ್ತಿದ್ದ ವ್ಯಕ್ತಿಗೆ ಬುದ್ದಿವಾದ ಹೇಳಿದ ಹಿನ್ನಲೆ ಅವ್ಯಾಚ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.RI ನಂದಕುಮಾರ್ ಮೇಲೆ ಹಲ್ಲೆ ನಡೆದಿದೆ.ಕುಂಬಾರಕೊಪ್ಪಲು ನಿವಾಸಿ ಧನುಷ್ ಎಂಬಾತ ಹಲ್ಲೆ ನಡೆಸಿದ್ದು ವಿಡಿಯೋ ವೈರಲ್ ಆಗಿದೆ.ನಿನ್ನೆ ಸಂಜೆ ಸುಮಾರು 4.30 ರಲ್ಲಿ ವಲಯ ಕಚೇರಿ 5 ರ ಬಾಗಿಲ ಬಳಿ ಧನುಷ್ ಎಂಬಾತ ಸಿಗರೇಟ್ ಸೇದುತ್ತಾ ನಿಂತಿದ್ದ.ಸರ್ಕಾರಿ ಕಚೇರಿ ಹತ್ತಿರ ಸಿಗರೇಟ್ ಸೇದಬಾರದೆಂದು RI ನಂದಕುಮಾರ್ ಬುದ್ದಿ ಹೇಳಿದ್ದಾರೆ.ಇದರಿಂದ ಸಿಟ್ಟಿಗೆದ್ದ ಧನುಷ್ ಕಚೇರಿ ಒಳಗೆ ನುಗ್ಗಿ ಸಹದ್ಯೋಗಿಗಳ ಮುಂದೆ ಅವ್ಯಾಚ ಶಬ್ಧಗಳಿಂದ ನಿಂದಿಸುತ್ತಾ ಕತ್ತಿನಪಟ್ಟಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ.ಧನುಷ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…