ಮೃತ ಆನೆಯ ದಂತ ಬೇರ್ಪಡಿಸಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು…
- TV10 Kannada Exclusive
- December 8, 2023
- No Comment
- 168

ಗುಂಡ್ಲುಪೇಟೆ,ಡಿ7,Tv10 ಕನ್ನಡ

ಸ್ವಾಭಾವಿಕವಾಗಿ ಮೃತಪಟ್ಟ ಆನೆಯ ದಂತಗಳನ್ನ ಬೇರ್ಪಡಿಸಿ ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.ಗುಂಡ್ಲುಪೇಟೆ ನಾಗಣಾಪುರ ಹುಣಸೆತಾಳ ಕಂಡಿ ಅರಣ್ಯಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ಮೃತ ಆನೆ ದೇಹ ಕಂಡುಬಂದಿದೆ.ಕೂಡಲೇ ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ.ಇಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಕುಮಾರ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ,ಹಾಗೂ ಇತರ ಅಧಿಕಾರಿಗಳಾದ ಸತೀಶ್ ಕುಮಾರ್,ಅಮರ್ ಕೆ.ಪಿ,ಸಂತೋಷ್ ಹಾಗೂ ವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ ರವರ ಸಮ್ಮುಖದಲ್ಲಿ ಮೃತಪಟ್ಟ ಗಂಡಾನೆಯ ಎರಡು ದಂತಗಳನ್ನ ಬೇರ್ಪಡಿಸಿ ವಶಕ್ಕೆ ಪಡೆದಿದ್ದಾರೆ…