ಎಂಜಿ ರಸ್ತೆ ತರಕಾರಿ ಮಾರುಕಟ್ಟೆ ಪ್ರದೇಶ ಖಾಸಗಿ ವ್ಯಕ್ತಿ ಪಾಲಿಗೆ…ಮೈಸೂರು ಪ್ರಧಾನ ಸೆಶೆನ್ ನ್ಯಾಯಾಲಯದ ಮಹತ್ತರ ತೀರ್ಪು…ತರಕಾರಿ ಮಾರಾಟಗಾರರು ಅತಂತ್ರ…
- TV10 Kannada Exclusive
- December 8, 2023
- No Comment
- 562

ಮೈಸೂರು,ಡಿ8,Tv10 ಕನ್ನಡ
ಮೈಸೂರಿನ ಎಂಜಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಪ್ರದೇಶ ಖಾಸಗಿ ವ್ಯಕ್ತಿ ಪಾಲಾಗಿದೆ.ಮೈಸೂರು ಪ್ರಧಾನ ಸೆಶೆನ್ ನ್ಯಾಯಾಲಯದ ನ್ಯಾಯಾಧೀಶರಾದ ಸಂಗ್ರೇಶಿ ರವರು ಮಹತ್ತರ ತೀರ್ಪು ನೀಡಿದ್ದಾರೆ.ಈ ಮೂಲಕ ತರಕಾರಿ ಮಾರಾಟಗಾರರು ಅತಂತ್ರಕ್ಕೆ ಸಿಲುಕಿದ್ದಾರೆ.
ತರಕಾರಿ ಮಾರುಕಟ್ಟೆ ಪ್ರದೇಶ ವಿಸ್ತೀರ್ಣ ಸುಮಾರು ಎರಡು ಎಕರೆ ಜಾಗವನ್ನ ವಸ್ತುಪ್ರದರ್ಶನ ಪ್ರಾಧಿಕಾರ ನಮಗೆ ಸೇರಿದ್ದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ ರಾಜವಂಶಸ್ಥರ ತೆರಿಗೆ ಬಾಕಿ ವಸೂಲಾತಿಗಾಗಿ ಸದರಿ ಎರಡು ಎಕರೆ ಪ್ರದೇಶವನ್ನ ಹರಾಜು ಹಾಕಿದ್ದು ಬೆಂಗಳೂರು ಮೂಲದ ವಿಜಯ್ ಕುಮಾರ್ ಎಂಬುವರು ಖರೀದಿಸಿದ್ದರು.ರಾಜವಂಶಸ್ಥರಿಗೆ ಸೇರಿದ ಗರಿಕೆ ಮಾಳದ ಸುಮಾರು 145 ಎಕ್ರೆ ಪೈಕಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ರವರು 80 ಎಕ್ರೆ ಜಾಗವನ್ನ ಸ್ವಾಧೀನಪಡಿಸಿಕೊಂಡು ವಸ್ತುಪ್ರದರ್ಶನಕ್ಕಾಗಿ ನೀಡಿದ್ದರು.ಈ ಹಿನ್ನಲೆ ವಸ್ತುಪ್ರದರ್ಶನ ಪ್ರಾಧಿಕಾರ ಎಂಜಿ ಮಾರುಕಟ್ಟೆ ಜಾಗವೂ ಸಹ ನಮಗೆ ಸೇರಿದ್ದೆಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.ಇದೀಗ ನ್ಯಾಯಾಲಯ ತೀರ್ಪು ನೀಡಿದ್ದು ಸದರಿ ಜಾಗ ವಿಜಯ್ ಕುಮಾರ್ ಗೆ ಸೇರಿದ್ದಾಗಿ ತಿಳಿಸಿದೆ.ವಿಜಯ್ ಕುಮಾರ್ ಪರ ಹಿರಿಯ ವಕೀಲರಾದ ಪಿ.ಶ್ಯಾಂಭಟ್ ವಾದ ಮಂಡಿಸಿದ್ದರು.ಸಧ್ಯ ಈ ತೀರ್ಪಿನಿಂದ ನೂರಾರು ತರಕಾರಿ ಮಾರಾಟಗಾರರು ಅತಂತ್ರಕ್ಕೆ ಸಿಲುಕಿದ್ದಾರೆ.ವ್ಯಾಪಾರ ವಹಿವಾಟನ್ನ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಬಂದಿದೆ…