ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ…ವಿಧ್ಯಾರ್ಥಿಗಳಿಗೆ ಪೊಲೀಸರ ಸಲಹೆ…
- TV10 Kannada Exclusive
- December 8, 2023
- No Comment
- 207

ಹುಣಸೂರು,ಡಿ8,Tv10 ಕನ್ನಡ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಗುರುಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಯಿತು. ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಿ ತಮ್ಮ ಆಭರಣಗಳ ಬಗ್ಗೆ ನಿಗವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ ನಿಯಮಗಳ ಬಗ್ಗೆ, ಗಮನವನ್ನು ಬೇರೆಡೆ ಸೆಳೆದು ಹಣ ಲಪಟಾಯಿಸುವವರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸುಮಾರು 250 ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರಾದ ಶ್ರೀ ಎಚ್.ಎನ್.ಎಸ್ ಬೇಗ್ , ಶಿಕ್ಷಕಿಯಾದ ಲೀಲಾವತಿ, ಶಿಕ್ಷಕರಾದ ಮಂಜುನಾಥ್, ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು…