ಮುಸ್ಲಿಂ ಸಮುದಾಯದ ಪರ ಸಿಎಂ ಸಿದ್ದು ಭರ್ಜರಿ ಬ್ಯಾಟಿಂಗ್ ಆರೋಪ…ಹಿಂದು ಸಂಘಟನೆಗಳಿಂದ ಕ್ರಮ ಕೈಗೊಳ್ಳುವಂತೆ ಮನವಿ…
- TV10 Kannada Exclusive
- December 8, 2023
- No Comment
- 289

ಮೈಸೂರು,ಡಿ8,Tv10 ಕನ್ನಡ
ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ ಕೊಡುವುದಾಗಿ ನೀಡಿರುವ ಹೇಳಿಕೆಯನ್ನ ವಿರೋಧಿಸಿ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಿಂದೂ ಪರ ಸಂಘಟನೆಯ ಮುಖಂಡರು ದೂರು ನೀಡಿದ್ದಾರೆ.ಹುಬ್ಬಳ್ಳಿ ಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ಕ್ರಮಕೈಗೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದ್ದಾರೆ. ಈಗಾಗಲೇ ನಾಲ್ಕು ಸಾವಿರ ಕೋಟಿ ಅನುದಾನ ನೀಡಿದ್ದು, ಮುಂದಿನ ವರ್ಷ ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಅನುದಾನ ಕೊಡುತ್ತೇನೆ ಎಂದು ಹೇಳಿದ್ದಾರೆ.ಈ ಹೇಳಿಕೆಯು ಸಂವಿಧಾನ ವಿರೋಧಿಯಾಗಿದೆ.
ಮುಸ್ಲಿಮರಿಗೆ ಪ್ರತ್ಯೇಕ ಅನುದಾನ ಕೊಡಲು ನಮ್ಮ ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ ಎಂದು ಮುಖಂಡರು ದೂರಿದ್ದಾರೆ.
ರಾಜ್ಯದ ಖಜಾನೆಯ ಹಣವನ್ನು ಅಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವುದನ್ನು ರಾಜ್ಯಪಾಲರ ಗಮನಕ್ಕೆ ತರುತ್ತಿದ್ದೇವೆ.ಇದು ಸಂವಿಧಾನ ವಿರೋದಿಯಾಗಿರುವುದರಿಂದ ತಕ್ಷಣ ಸಿದ್ದರಾಮಯ್ಯ ಸರಕಾರವನ್ನು ವಜಾಗೊಳಿಸಬೇಕೆಂದು ಹಿಂದೂಪರ ಸಂಘಟನೆ ಆಗ್ರಹಿಸಿದೆ. ಸಮಾವೇಶದಲ್ಲಿ ಸಿದ್ದರಾಮಯ್ಯನವರ ಜೊತೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಎಂಬ ಮುಸ್ಲಿಂ ಮೌಲ್ವಿಗೆ ಶಂಕಿತ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಇದೆ ಎಂದು ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದ್ದಾರೆ.
ಈ ವ್ಯಕ್ತಿಯು ಭಾರತದ ಚಟುವಟಿಕೆಗಳನ್ನು ಅರಬ್ ದೇಶಗಳಿಗೆ ರವಾನಿಸುವ ದೇಶದ್ರೋಹಿ ಕೆಲಸದ ಬಗ್ಗೆ ಟ್ವಿಟ್ಟರ್ ನಲ್ಲಿ ಯತ್ನಾಳ್ ತಿಳಿಸಿದ್ದಾರೆ. ಹಾಗಾಗಿ ಇದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದು, ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ವೇಳೆ ಹಿಂದೂಪರ ಸಂಘಟನೆಯ ಮುಖಂಡರಾದ
ಮಹಾಬಲೇಶ್ವರ ಕ್ಷೇತ್ರೀಯ ಸತ್ಸಂಗ ಪ್ರಮುಖ, ಸವಿತಾ ಘಾಟ್ಕೆ ವಿಭಾಗ ಸಂಯೋಜಕಿ,ಮಧುಶಂಕರ್ ಕಾರ್ಯದರ್ಶಿ ವಿ.ಹೆಚ್.ಪಿ,ಮರಿಯಪ್ಪ,
ಡಾ: ಎ. ಎಫ್ ಕೃಷ್ಣಮೂರ್ತಿ ಕೋಶಾಧ್ಯಕ್ಷರು,
ಲೋಕೇಶ್ ಹಾಜರಿದ್ದರು.