ಹಳೆ ವೈಷಮ್ಯ… ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ..
- Crime
- December 9, 2023
- No Comment
- 198
ಮಂಡ್ಯ,ಡಿ9,Tv10 ಕನ್ನಡ
ಹಳೇ ವೈಷಮ್ಯ ಹಿನ್ನಲೆ ವ್ಯಕ್ತಿಯನ್ನ ಕೊಚ್ಚಿ ಕೊಂದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕಾರೆಕುರ ಗ್ರಾಮದ ಬಳಿ ನಡೆದಿದೆ.ಮಂಡ್ಯ ಪೊಲೀಸ್ ಅಧೀಕ್ಷಕರಾದ ಯತೀಶ್.ಎನ್ ಐಪಿಎಸ್ ರವರು ಮತ್ತು ಎ.ಎಸ್.ಪಿ ಸಿ.ಈ.ತಿಮ್ಮಯ್ಯರವರು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೇಕುರ ಗ್ರಾಮದಲ್ಲಿ ನನ್ನೆ ರಾತ್ರಿ ನಡೆದ ಕೊಲೆ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿ ಕೃತ್ಯದ ಬಗ್ಗೆ ಮಾಹಿತಿ ಪಡೆದು ತನಿಖಾಧಿಕಾರಿಗೆ ಪ್ರಕರಣದ ತನಿಖೆ ಮತ್ತು ಆರೋಪಿಗಳ ಪತ್ತೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.