ಮಾಜಿ ಆದರೂ ವಿಶ್ರಾಂತಿ ಇಲ್ಲ…ಸಾಮಾಜಿಕ ಕಳಕಳಿ ಮರೆಯಲ್ಲ…ಉದ್ಯಾನವನದ ಸ್ವಚ್ಛತೆಗೆ ಇಳಿದ ಮಾಜಿ ಪುರಪಿತೃ ಮ.ವಿ.ರಾಮಪ್ರಸಾದ…

ಮೈಸೂರು,ಡಿ10,Tv10 ಕನ್ನಡ

ನವೆಂಬರ್ 16 ಕಾರ್ಪೊರೇಟರ್ ಗಳ ಅವಧಿ ಮುಗಿದಿದೆ.65 ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಂಡಿದ್ದಾರೆ.ಅವಧಿ ಮುಗಿದರೂ ವಿಶ್ರಾಂತಿ ಪಡೆಯದ ವಾರ್ಡ್ 55 ರ ಮಾಜಿ ಕಾರ್ಪೊರೇಟರ್ ಸಾಮಾಜಿಕ ಕಳಕಳಿಗೆ ಆಧ್ಯತೆ ನೀಡುತ್ತಿದ್ದಾರೆ.ತಾವು ಪ್ರತಿನಿಧಿಸಿದ್ದ ವಾರ್ಡ್ ನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿ ಮುಂದುವರೆಯುತ್ತಿದ್ದಾರೆ.ರೆಸ್ಟ್ ಗೆ ಮೊರೆ ಹೋಗದ ಮ.ವಿ.ರಾಮಪ್ರಸಾದ ಅಕ್ಕಮ್ಮಣ್ಣಿ ಆಸ್ಪತ್ರೆಯ ಉದ್ಯಾನವನದ ಸ್ವಚ್ಛತೆಗೆ ಮುಂದಾಗಿದ್ದಾರೆ.ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಾಣ ಮಾಡಿದ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ಪ್ರತಿದಿನ ನೂರಾರು ಮಂದಿ ಈ ಪಾರ್ಕ್ ನಲ್ಲಿ ವಾಯುವಿಹಾರ ಮಾಡುತ್ತಾರೆ.ಪಾರ್ಕ್ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿವೆ.ಗಿಡಗಂಟೆಗಳು ಪಾಲಿಕೆ ಅಧಿಕಾರಿಗಳನ್ನ ಅಣಕಿಸುತ್ತಿವೆ.ನಿರ್ವಹಣೆ ಕಾಣದ ಉದ್ಯಾನವನದ ಸ್ವಚ್ಛತೆಗೆ ಸ್ಥಳೀಯರ ನೆರವಿಗೆ ಮ.ವಿ.ರಾಮಪ್ರಸಾದ ಮುಂದಾಗಿದ್ದಾರೆ.ಖುದ್ದು ಸ್ವಚ್ಛತಾ ಪರಿಕರಗಳನ್ನ ಹಿಡಿದ ಮ.ವಿ.ರಾಮಪ್ರಸಾದ್ ಗಿಡಗಂಟೆಗಳನ್ನ ತೆರುವುಗೊಳಿಸುತ್ತಿದ್ದಾರೆ.ಪಾರ್ಕ್ ನಿರ್ವಹಣೆಗೆ ಸಿಬ್ಬಂದಿಗಳನ್ನ ನೇಮಿಸುವಂತೆ ಮ.ವಿ.ರಾಮಪ್ರಸಾದ್ ಪಾಲಿಕೆ ಆಯುಕ್ತರನ್ನ ಒತ್ತಾಯಿಸಿದ್ದಾರೆ.ಅವಧಿ ಮುಗಿದರೂ ಜನರ ಸೇವೆಗೆ ಮುಂದಾಗಿರುವ ಮ.ವಿ.ರಾಮಪ್ರಸಾದ್ ಇತರ ಮಾಜಿಗಳಿಗೂ ಮಾದರಿಯಾಗಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *