ಕೌಟುಂಬಿಕ ಕಲಹ…ಪತ್ನಿಯನ್ನೇ ಕೊಲೆಗೈದ ಪತಿ…
- Crime
- December 13, 2023
- No Comment
- 355

ಮಂಡ್ಯ,ಡಿ13,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಪತಿರಾಯ ಪತ್ನಿಯನ್ನ ಕೊಲೈಗೈದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ
ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಧುಶ್ರೀ(32) ಪತಿಯಿಂದಲೆ ಕೊಲೆಯಾದ ಪತ್ನಿ.
ಮಹದೇವ್(38) ಕೊಲೆಗೈದ ಕಿರಾತಕ ಪತಿ.ಹತ್ತು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಂಪತಿಗೆ
ದಂಪತಿಗೆ 8 ವರ್ಷ ಹಾಗೂ 6 ವರ್ಷದ ಇಬ್ಬರು ಪುತ್ರಿಯರಿದ್ದಾರೆ.
ಚಾಲಕನಾಗಿದ್ದ ಆರೋಪಿ ಮಹದೇವ್
ಮನಸ್ತಾಪದಿಂದ ಆಗಾಗ ಪತ್ನಿ ಜೊತೆ ಜಗಳವಾಡುತ್ತಿದ್ದ.
ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿಗೆ
ಕಬ್ಬಿಣದ ರಾಡು, ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ. ಗಂಭೀರ ಪೆಟ್ಟುತಿಂದ ಮಧುಶ್ರೀ
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತ್ನಿಯನ್ನ ಕೊಲೆ ಮಾಡಿದ ಪತಿ ಕಿರುಗಾವಲು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…