ನಂಜನಗೂಡು ನಗರಸಭೆ ಕಚೇರಿಯಲ್ಲಿ ಕಡತ ನಾಪತ್ತೆ…SDA ವಿರುದ್ದ ದೂರು ದಾಖಲಿಸಿದ ಕಂದಾಯ ಅಧಿಕಾರಿ…
- Crime
- December 16, 2023
- No Comment
- 118
ನಂಜನಗೂಡು,ಡಿ16,Tv10 ಕನ್ನಡ
ಅಕ್ರಮವಾಗಿ ನಿವೇಶನಗಳಿಗೆ ಖಾತೆ ಮಾಡಿಕೊಟ್ಟ ಕಡತ ನಾಪತ್ತೆಯಾದ ಹಿನ್ನಲೆ ನಂಜನಗೂಡು ನಗರಸಭೆ ಕಂದಾಯ ಅಧಿಕಾರಿಯೊಬ್ಬರು ದ್ವಿತೀಯ ದರ್ಜೆ ಸಹಾಯಕರ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕಡತದ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ದ್ವಿತೀಯ ದರ್ಜೆ ಸಹಾಯಕ ಡಿ.ಎಂ.ನರಸಿಂಹಮೂರ್ತಿ ವಿರುದ್ದ ಕಂದಾಯ ಅಧಿಕಾರಿ ಎಸ್.ಡಿ.ವೆಂಕಟೇಶ್ ದೂರು ನೀಡಿದ್ದಾರೆ.ನರಸಿಂಹ ಮೂರ್ತಿಯನ್ನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಕಡತ ದೊರಕಿಸಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ನಂಜನಗೂಡು ತಾಲೂಕು ದೇವೀರಮ್ಮನಹಳ್ಳಿ ಗ್ರಾಮದ ಸರ್ವೆ ನಂ.58,59 ರಲ್ಲಿ 3 ಎಕ್ರೆ 16 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಬಡಾವಣೆಯ ಖಾತೆಯನ್ನ ಅಕ್ರಮವಾಗಿ KMF-24 ರ ವಹಿಯಲ್ಲಿ ನಮೂದಿಸಿದ್ದು,ಸದರಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಹಾಗೂ ನೌಕರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದು,ಸದರಿ KMF-24 ಸಂಖ್ಯೆ 106 ರಲ್ಲಿ ನಮೂದಿಸಿರುವ ಅಸೆಸ್ ಮೆಂಟ್ 17115/406/1 ರಿಂದ 17115/406/48 ರವರೆಗೆ 48 ಖಾತೆಗಳನ್ನ ಅಕ್ರಮವಾಗಿ ದಾಖಲಿಸಿರುವ ಕಡತದ ನಿರ್ವಹಣೆ ಹಾಗೂ ಸಂರಕ್ಷಣೆ ಜವಾಬ್ದಾರಿ ಡಿ.ಎಂ.ನರಸಿಂಹಮೂರ್ತಿಯವರದ್ದಾಗಿದೆ.ಆದರೆ ಸದರಿ ಕಡತ ಲಭ್ಯವಿಲ್ಲದ ಕಾರಣ ಡಿ.ಎಂ.ನರಸಿಂಹಮೂರ್ತಿಯವರನ್ನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಕಡತ ದೊರಕಿಸಿಕೊಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ…