ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆ…
- TV10 Kannada Exclusive
- December 19, 2023
- No Comment
- 256
ಮೈಸೂರು,ಡಿ19,Tv10 ಕನ್ನಡ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆಯಾಗಿದೆ. ನಗರ ಪ್ರದೇಶಕ್ಕೆ ಚಿರತೆ ಬಂದಿರುವುದು ಆತಂಕ ಸೃಷ್ಟಿಸಿದೆ. ಮೈಸೂರು ಹೊರವಲಯದ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದುದು ಸಹಜ. ಇದೀಗ ಮೈಸೂರು ನಗರದೊಳಗೇ ಚಿರತೆ ಸೆರೆಸಿಕ್ಕಿರುವುದರಿಂದ ಜನ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆಯವರು ರಾಮಕೃಷ್ಣ ಆಶ್ರಮದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ.
ನಾಲ್ಕು ದಿನದ ಹಿಂದೆ ಬೋನು ಇರಿಸಲಾಗಿತ್ತು.ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ…