ವರದಕ್ಷಿಣೆ ಕಿರುಕುಳ…ಹಸೆಮಣೆ ಏರಬೇಕಿದ್ದ ಲಾ ಸ್ಟೂಡೆಂಟ್ ನೇಣಿಗೆ…

  • Crime
  • December 19, 2023
  • No Comment
  • 404

ಮೈಸೂರು,ಡಿ19,Tv10 ಕನ್ನಡ

ಮದುವೆ ನಿಶ್ಚಿತಾರ್ಥವಾದ ನಂತರ ವರದಕ್ಷಿಗಾಗಿ ಪೀಡಿಸಿದ ಹಿನ್ನಲೆ ಕಾನೂನು ಪದವೀಧರೆ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಮಿಳುನಾಡು ನೀಲಗಿರೀಸ್ ಮೂಲದ ಕವೀಶ(21) ಮೃತ ದುರ್ದೈವಿ.ಮೈಸೂರಿನ ಜೆ.ಎಸ್.ಎಸ್.ಕಾನೂನು ಕಾಲೇಜಿನಲ್ಲಿ 7 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಕವೀಶ ಕೆಲವು ದಿನಗಳಿಂದ ಊಟಿ ನಿವಾಸಿ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರ ನಡುವಿನ ಲವ್ ಮ್ಯಾಟರ್ ಮನೆಯವರಿಗೆ ಗೊತ್ತಾಗಿತ್ತು.ಇದೇ ವೇಳೆ ಕಿರಣ್ ಮನೆಯವರು ಕವೀಶ ಮನೆಗೆ ಬಂದು ಪೊಷಕರನ್ನ ಒಪ್ಪಿಸಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ನಿಶ್ಚಿತಾರ್ಥದ ನಂತರ ಕಿರಣ್ ವರದಕ್ಷಿಣೆಯಾಗಿ ಕಾರು ಹಾಗೂ ಚಿನ್ನ ನೀಡಬೇಕೆಂದು ಪೀಡಿಸಿದ್ದಾನೆ.ಇಲ್ಲದಿದ್ದಲ್ಲಿ ಮದುವೆ ನಿಲ್ಲಿಸುವುದಾಗಿ ಬೆದರಿಸಿದ್ದಾನೆ.ಇದರಿಂದಾಗಿ ಮನನೊಂದ ಕವೀಶ ತಾನು ತಂಗಿದ್ದ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ.ಕವೀಶ ಪೋಷಕರು ಕಿರಣ್ ಹಾಗೂ ಆತನ ತಂದೆ ಸೇತುಮಾಧವ,ತಾಯಿ ಲತಾ ಹಾಗೂ ಮಾವನ ವಿರುದ್ದ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *