ನಿವೃತ್ತ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಮೀಸಲುಪಡೆ ಸಿಬ್ಬಂದಿಗಳನ್ನ ಹಿಂಪಡೆಯಿರಿ…ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ಆದೇಶ…
- TV10 Kannada Exclusive
- December 21, 2023
- No Comment
- 318

ಬೆಂಗಳೂರು,ಡಿ21,Tv10 ಕನ್ನಡ
ನಿವೃತ್ತ ಐಪಿಎಸ್ ಹಾಗೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆ.ಎಸ್.ಆರ್.ಪಿ. ಸಿಬ್ಬಂದಿಗಳನ್ನ ಹಿಂದಕ್ಕೆ ಪಡೆಯುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಐಜಿ ಹಾಗೂ ಡಿಜಿ ಗಳಿಗೆ ಸೂಚನೆ ನೀಡಿದ್ದಾರೆ.ನಿವೃತ್ತ ಅಧಿಕಾರಿಯಾದ ಸುನಿಲ್ ಅಗರವಾಲ್,ಭಾಸ್ಕರ್ ರಾವ್ ಸೇರಿದಂತೆ ಹಲವರ ಮನೆಯಲ್ಲಿ ಇನ್ನೂ ಕರ್ನಾಟಕ ರಾಜ್ಯ ಮೀಸಲು ಪಡೆ ಸಿಬ್ಬಂದಿಗಳು ಕೆಲಸ ಮುಂದುವರೆಸಿದ್ದು ಕೂಡಲೇ ಅವರನ್ನ ಹಿಂದಕ್ಕೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನಲೆ ಕ್ರಮ ಕೈಗೊಳ್ಳಲು ಮುಂದಾದ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಬಾಣದ ರಂಗಯ್ಯ ಎನ್.ಆರ್.ರವರು ಆದೇಶಿಸಿದ್ದಾರೆ.ಈ ಹಿನ್ನಲೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯಿಂದ ಕೆ.ಎಸ್.ಆರ್.ಪಿ ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ…