ಶುದ್ದಕುಡಿಯುವ ನೀರಿನ ಘಟಕದ ದುರಸ್ಥಿಗಾಗಿ ಪ್ರತಿಭಟನೆ…ರಿಪೇರಿಗೆ ಹಣ ಇಲ್ಲವೆಂದ ಅಧಿಕಾರಿ ವಿರುದ್ದ ಆಕ್ರೋಷ…
- TV10 Kannada Exclusive
- December 23, 2023
- No Comment
- 131


ಹೆಚ್.ಡಿ.ಕೋಟೆ,ಡಿ23,Tv10 ಕನ್ನಡ

ಹೆಚ್.ಡಿ.ಕೋಟೆ ಅಣ್ಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ದಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು ತಿಂಗಳುಗಳೇ ಉರುಳಿದರೂ ದುರಸ್ಥಿಗೆ ಸಂಭಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಅಣ್ಣೂರು ಗ್ರಾಮ ಪಂಚಾಯ್ತಿ ಸಭೆ ನಡೆಯುವ ವೇಳೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಣಧಿಕಾರಿ ಗಾಯತ್ರಿ ರವರಿಗೆ ಮನವಿ ಸಲ್ಲಿಸಿದಾಗ ನಿರ್ಲಕ್ಷಿಸಿ ನಮ್ಮಲ್ಲಿ ಹಣ ಇಲ್ಲವೆಂದು ಕಾರಣ ನೀಡಿದ್ದಾರೆಂದು ಆರೋಪಿಸುವ ಗ್ರಾಮ ಪಂಚಾಯ್ತಿ ಸದಸ್ಯರು ಕೂಡಲೇ ಶುದ್ದ ಕುಡಿಯುವ ನೀರಿನ ಘಟಕಗಳನ್ನ ದುರಸ್ತುಗೊಳಿಸುವಂತೆ ಆಗ್ರಹಿಸಿದ್ದಾರೆ…