ನಂಜನಗೂಡು:ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರಲ್ಲಿ ಆತಂಕ ದೂರ…
- Crime
- December 23, 2023
- No Comment
- 150

ನಂಜನಗೂಡು,ಡಿ23,Tv10 ಕನ್ನಡ
ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಬಳಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಮಡುವಿನಹಳ್ಳಿ ಹಾಗೂ ಕಂದೇಗಾಲ ಗ್ರಾಮದ ಮುಖ್ಯ ರಸ್ತೆಯ ಜಮೀನುಗಳಲ್ಲಿದ್ದ ಸಾಲು ಪ್ರಾಣಿಗಳನ್ನ ಬಲಿ ಪಡೆದು ಸ್ಥಳೀಯರಿಗೆ ಭೀತಿ ಹುಟ್ಟಿಸಿದ್ದ ಚಿರತೆ ಸೆರೆಯಾಗಿದೆ. ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟ ಬೋನಿಗೆ ಬಿದ್ದಿದೆ. ಹೆಡಿಯಾಲ ಅರಣ್ಯ ಇಲಾಖೆ ಸಹಾಯಕ ಅಧಿಕಾರಿ ಮಹಾಂತೇಶ್ ರವರು ಬೋನು ಇರಿಸಿದ್ದರು. ತಡರಾತ್ರಿ ಎರಡು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದ ಅರಣ್ಯಕ್ಕೆ ಸೆರೆಯಾಗಿರುವ ಚಿರತೆಯನ್ನು ಸ್ಥಳಾಂತರಿಸಲಾಗಿದೆ…
