ದಟ್ಟಗಳ್ಳಿ ವಿವಾದಿತ ಜಮೀನಿನ ರಕ್ಷಣೆಗೆ ಮುಂದಾದ ಶಾಸಕದ್ವಯರು…ದೃಢೀಕರಿಸಿದ ದಾಖಲೆಗಳನ್ನ ನೀಡುವಂತೆ ಮುಡಾ ಆಯುಕ್ತರಿಗೆ ಪತ್ರ…
- TV10 Kannada Exclusive
- December 29, 2023
- No Comment
- 1202
ಮೈಸೂರು,ಡಿ29,Tv10 ಕನ್ನಡ
ಮೈಸೂರಿನ ದಟ್ಟಗಳ್ಳಿ ಗ್ರಾಮದ ಸರ್ವೆ ನಂ.27/1,27/2,27/4,29/1a,32,38/1,38/2 ಸೇರಿದಂತೆ ವಿವಿದ ಸರ್ವೆ ನಂಬರ್ ಗಳ ಸುಮಾರು 27.34 ಎಕ್ರೆ ಜಮೀನುಗಳ ವಿವಾದಕ್ಕೆ ಬ್ರೇಕ್ ಹಾಕಲು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡೀಸಿದ್ದೇಗೌಡ ರವರು ಮುಂದಾಗಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ ಮುಡಾ ಆಸ್ತಿಯನ್ನ ಕಬಳಿಸಲು ಸಂಚು ರೂಪಿಸಿರುವ ಆರೋಪಕ್ಕೆ ಸಂಭಂಧಿಸಿದಂತೆ ಪ್ರಾಧಿಕಾರದ ಬಳಿ ಇರುವ ಎಲ್ಲಾ ದಾಖಲೆಗಳನ್ನ ಧೃಢೀಕರಿಸಿ ನೀಡುವಂತೆ ಮುಡಾ ಆಯುಕ್ತರಿಗೆ ಶಾಸಕಧ್ವಯರು ಪತ್ರ ಬರೆದಿದ್ದಾರೆ.
ಸದರಿ ಜಮೀನುಗಳ ಬಗ್ಗೆ 21-3-2023 ರಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಇದರ ಸದುಪಯೋಗಪಡಿಸಿಕೊಂಡ ಮೂರನೇ ವ್ಯಕ್ತಿಯೊಬ್ಬರು ಉಚ್ಛನ್ಯಾಯಾಲಯದಲ್ಲಿ ಆದೇಶ ಪಡೆದುಕೊಂಡು ಕಬಳಿಸಲು ಉದ್ದೇಶಿಸಿರುವ ಆರೋಪ ಕೇಳಿ ಬಂದ ಹಿನ್ನಲೆ ಜಿಲ್ಲಾಧಿಕಾರಿಗಳು ಮುಡಾ ಆಯುಕ್ತರಿಗೆ ಪತ್ರ ಬರೆದು ದಾಖಲೆಗಳ ಸಮೇತ ಹಾಜರಾಗುವಂತೆ ಸೂಚಿಸಿದ್ದರು.ಈ ಬೆಳವಣಿಗೆಯ ಹಿನ್ನಲೆಯಲ್ಲೇ ಶಾಸಕರಿಬ್ಬರು ಒಂದೇ ಪತ್ರದಲ್ಲಿ ಸಹಿ ಹಾಕಿ ಮುಡಾ ಆಯುಕ್ತರಿಗೆ ಪತ್ರ ಬರೆದು ಸಂಪೂರ್ಣ ದಾಖಲೆಗಳನ್ನ ಒದಗಿಸುವಂತೆ ಮನವಿ ಮಾಡಿದ್ದಾರೆ.
ಸದರಿ ವಿಷಯದ ಬಗ್ಗೆ ಯಾವ ಶಾಸಕರೂ ಇದುವರೆಗರ ಚಕಾರ ಎತ್ತಿಲ್ಲ.ಮೌನ ಮುರಿದ ಶಾಸಕ ಕೆ.ಹರೀಶ್ ಗೌಡ ಹಾಗೂ ರಮೇಶ್ ಬಂಡಿ ಸಿದ್ದೇಗೌಡ ಜಿಲ್ಲಾಧಿಕಾರಿಗಳ ಪರ ಬ್ಯಾಟ್ ಬೀಸಿದ್ದಾರೆ.ಇನ್ನಾದರೂ ಮೈಸೂರು ಜಿಲ್ಲೆಯಿಂದ ಚುನಾಯಿತರಾದ ಉಳಿದ ಶಾಸಕರು ಎಚ್ಚೆತ್ತುಕೊಳ್ಳುತ್ತಾರೆಯೇ…?