ದ್ವಿಚಕ್ರ ವಾಹನಗಳಿಗೆ ಆಶ್ರಯವಾದ ಬಸ್ ತಂಗುದಾಣ…
- TV10 Kannada Exclusive
- December 29, 2023
- No Comment
- 138
ಮೈಸೂರು,ಡಿ29,Tv10 ಕನ್ನಡ
ಪ್ರಯಾಣಿಕರಿಗೆ ಆಶ್ರಯವಾಗಬೇಕಿದ್ದ ಬಸ್ ತಂಗುದಾಣ ದ್ವಿಚಕ್ರ ವಾಹನಗಳಿಗೆ ಆಶ್ರಯ ನೀಡಿದೆ.ಜೆ.ಸಿ.ಕಾಲೇಜು ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣದ ಸ್ಥಿತಿ ಇದು.ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಉಪಯೋಗವಾಗಲೆಂದು ಮೈಸೂರು ಮಹಾನಗರ ಪಾಲಿಕೆ ಜೆ.ಸಿ.ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದೆ.ಆದರೆ ಈ ತಂಗುದಾಣವನ್ನ ಉಪಯೋಗಿಸಲು ಪ್ರಯಾಣಿಕರಿಗೆ ಸಾಧ್ಯವೇ ಆಗುತ್ತಿಲ್ಲ.ಕಾರಣ ಸಮೀಪದ ಕಾಲೇಜಿನ ವಿಧ್ಯಾರ್ಥಿಗಳು ಟೂ ವ್ಹೀಲರ್ ಪಾರ್ಕಿಂಗ್ ಗೆ ಬಳಸಿಕೊಂಡಿದ್ದಾರೆ.ಸಾವಿರಾರು ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬಸ್ ತಂಗುದಾಣ ಅರ್ಥಪೂರ್ಣವಾಗಿ ಬಳಕೆಯಾಗುತ್ತಿಲ್ಲ. ಹೆಲ್ಮೆಟ್ ಧರಿಸದ ವಿಧ್ಯಾರ್ಥಿಗಳನ್ನ ಕ್ಯಾಂಪಸ್ ಒಳಗೆ ಪ್ರವೇಶ ಇಲ್ಲವಂತೆ.ಹೀಗಾಗಿ ಹೆಲ್ಮೆಟ್ ಧರಿಸದೆ ಬರುವ ದ್ವಿಚಕ್ರ ವಾಹನ ವಿಧ್ಯಾರ್ಥಿಗಳು ಈ ಬಸ್ ತಂಗುದಾಣದಲ್ಲಿ ಪಾರ್ಕ್ ಮಾಡಿ ಕಾಲೇಜಿಗೆ ಪ್ರವೇಶಿಸುತ್ತಿದ್ದಾರೆ.ಪ್ರಯಾಣಿಕರಿಗೆ ಅನುಕೂಲವಾಗಬೇಕಿದ್ದ ಬಸ್ ತಂಗುದಾಣ ವಿಧ್ಯಾರ್ಥಿಗಳ ದ್ವಿಚಕ್ರ ವಾಹನಗಳಿಗೆ ಆಶ್ರಯ ನೀಡಿದೆ.ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ಬಸ್ ತಂಗುದಾಣದ ಬಳಕೆಯನ್ನ ಸರಿಪಡಿಸುವರೇ…?