ಮಹಿಳೆಯರ ದಾರಿ ದೀಪ ಸಾವಿತ್ರಿ ಬಾಯಿ ಪುಲೆ-ಭವ್ಯ ಬಾಲಸುಬ್ರಹ್ಮಣ್ಯಂ
- TV10 Kannada Exclusive
- January 4, 2024
- No Comment
- 137
ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅಕ್ಷರ ಜ್ಞಾನವನ್ನು ಉಣಪಡಿಸಿ ಶೋಷಿತರು ಮತ್ತು ಮಹಿಳೆಯರ ಏಳಿಗೆಗೆ ಶ್ರಮಿಸಿದವರು ಸಾವಿತ್ರಿಬಾಯಿ ಫುಲೆ. ಇವರು ಹೆಣ್ಣು ಮಕ್ಕಳಿಗೆ ದಾರಿದೀಪ ಎಂದು ಆಂಗ್ಲ ಭಾಷೆಯ ಉಪನ್ಯಾಸಕಿ ಭವ್ಯ ಬಾಲಸುಬ್ರಮಣ್ಯಂ ರವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿತ್ರಿಬಾಯಿ ಪುಲೆ ರವರ ಜನ್ಮದಿನಾಚರಣೆಯನ್ನು ವಿಶೇಷ ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳಿಗೆ ಸಾವಿತ್ರಿ ಬಾಯಿ ಫುಲೆ ರವರ ಜೀವನ ಚಿತ್ರಣವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಹಿರಿಯ ಮಹಿಳಾ ಉಪನ್ಯಾಸಕಿ ಜುಡಿತ್ ಸಿಕ್ವೈರಾ ರವರು 19ನೇ ಶತಮಾನದ ಮಧ್ಯಭಾಗದಲ್ಲಿ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಕಣ್ಣಾದವರು. ಬದುಕಿನಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಅಂದುಕೊಂಡಿದ್ದ ಗುರಿಯನ್ನು ಸಾಧಿಸಿದವರು. ಹೆಣ್ಣು ಮಕ್ಕಳಿಗೆ ಸಾವಿತ್ರಿಬಾಯಿ ಸ್ಫೂರ್ತಿಯ ಚೆಲುವೆ ಎಂದು ಹೇಳಿದರು . ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ಮಹತ್ವ ತಿಳಿಸಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ರವರು ಇಂದು ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ. ಹಾಗಾಗಿ ನಮ್ಮ ಸಂಸ್ಥೆಯ ಎಲ್ಲಾ ಮಹಿಳಾ ಉಪನ್ಯಾಸಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ .ದಿನೇಶ್ ರವರು ಕಾಲೇಜಿನ ಎಲ್ಲಾ ಮಹಿಳಾ ಉಪನ್ಯಾಸಕರನ್ನು ಗೌರವಿಸುವ ಮೂಲಕ ಗೌರವ ಸೂಚಿಸಲಾಯಿತು .
ಉಪನ್ಯಾಸಕರಾದ ರಂಗಸ್ವಾಮಿ, ಡಾ.ಕೆ.ಮಾಲತಿ ಮತ್ತು ಹರೀಶ್ ರವರು ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದರು .
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾರ್ಥನೆ ಬಿಂದು ಮತ್ತು ಕಾರ್ಯಕ್ರಮವನ್ನು ಡಾ. ಟಿ ಕೆ ರವಿ ನಿರೂಪಿಸಿದರು.