ಮೈಸೂರು:ಡಾಕ್ಟರ್ ಕಿಡ್ನಾಪ್ ಪ್ರಕರಣ…9 ವರ್ಷಗಳ ನಂತರ ಅಪಹರಣಕಾರನ ಬಂಧನ…ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

  • Crime
  • January 4, 2024
  • No Comment
  • 708

ಮೈಸೂರು:ಡಾಕ್ಟರ್ ಕಿಡ್ನಾಪ್ ಪ್ರಕರಣ…9 ವರ್ಷಗಳ ನಂತರ ಅಪಹರಣಕಾರನ ಬಂಧನ…ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಜ4,Tv10 ಕನ್ನಡ

2014 ರಲ್ಲಿ ವೈದ್ಯರೊಬ್ಬರನ್ನ ಅಪಹರಿಸಿ ಖಾಲಿ ಇರುವ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡು 5,20,000/- ವಸೂಲಿ ಮಾಡಿ ಬಿಡುಗಡೆ ಮಾಡಿ ನಂತರ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ದಟ್ಟಗಳ್ಳಿ ನಿವಾಸಿ ಫಣಿರಾಜ್ ಗೌಡ ಬಂಧಿತ ಆರೋಪಿ.2014 ರಲ್ಲಿ ಡಾ.ಮಹೇಶ್ ಎಂಬುವರನ್ನ ರಾಮಚಂದ್ರ.ಡಿ.ಹೆಗಡೆ ಎಂಬುವರ ನೆರವಿನಿಂದ ಬಲವಂತವಾಗಿ ಅಪಹರಿಸಿ ಕರೆದೊಯ್ದು ಖಾಲಿ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡು ನಂತರ 20,000/- ರೂ ವಸೂಲಿ ಮಾಡಿದ್ದಾರೆ.ಮತ್ತೆ ಡಾ.ಮಹೇಶ್ ರವರನ್ನ ಮಂಗಳೂರಿನ ಅಂಕೋಲಾ ಗೆ ಕರೆದೊಯ್ದು ಒಮ್ಮೆ 2 ಲಕ್ಷ ಹಾಗೂ ಮತ್ತೊಮ್ಮೆ 3 ಲಕ್ಷ ಹಣ ವಸೂಲಿ ಮಾಡಿ ಬಿಡುಗಡೆ ಮಾಡಿದ್ದಾರೆ.ಇದನ್ನ ಪೊಲೀಸರಿಗೆ ತಿಳಿಸಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ ಕಾರಣ ಡಾ.ಮಹೇಶ್ ಕೆಲವು ದಿನ ಮೌನಕ್ಕೆ ಶರಣಾಗಿ ನಂತರ ನ್ಯಾಯಾಲಯದ ಮೊರೆ ಹೋಗಿ ಪಿಸಿಆರ್ ಸಂಖ್ಯೆ 2342/14 ಅನ್ವಯದಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫಣಿರಾಜ್ ಗೌಡ ತಲೆ ಮರೆಸಿಕೊಂಡಿದ್ದನೆಂದು ಹೇಳಲಾಗಿದ್ದು ಇತ್ತೀಚೆಗಷ್ಟೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ಮನೆ ಮಾಡಿ ವಾಸವಿದ್ದ ಮಾಹಿತಿ ಅರಿತ ಕುವೆಂಪುನಗರ ಠಾಣೆ ಪೊಲೀಸರು ಆರೋಪಿ ಫಣಿರಾಜ್ ಗೌಡ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಶ್ಕಾ ವಿವಿದೋದ್ದೇಶ ಸೌಹಾರ್ಧ ಸಹಕಾರ ಸಂಘದ ನಿರ್ದೇಶಕನಾಗಿದ್ದ ಫಣಿರಾಜ್ ಗೌಡ ಸಾಕಷ್ಟು ಮಂದಿಗೆ ವಂಚಿಸಿರುವುದಾಗಿ ಬೆಳಕಿಗೆ ಬಂದಿದೆ.ಮೈಸೂರು,ಬೆಂಗಳೂರು,ಮಂಡ್ಯ,ತುಮಕೂರು ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.ಮನಿ ಡಬ್ಲಿಂಗ್,ಬಡಾವಣೆ ನಿರ್ಮಿಸಿ ನಿವೇಶನ ಹಂಚುವುದು,ಟೀಕ್ ಮರಗಳ ಮೇಲೆ ಬಂಡವಾಳ ಹೂಡುವುದು ಸೇರಿದಂತೆ ಹಲವು ಆಮಿಷವೊಡ್ಡಿ ಕೋಟ್ಯಾಂತರ ರೂ ವಂಚಿಸಿರುವ ಆರೋಪ ಈತನ ಮೇಲಿದೆ.ಕೆಲವು ಪ್ರಕರಣಗಳಿಗೆ ಜಾಮೀನು ಪಡೆದಿರುವ ಈತ ಕೆಲವು ಪ್ರಕರಣಗಳಿಗೆ ವಾರೆಂಟ್ ಗಳಿವೆ.ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಜೈಲು ವಾಸ ಅನುಭವಿಸಿರುವ ಫಣಿರಾಜ್ ಗೌಡ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿ ಮೈಸೂರಿನ ದಟ್ಟಗಳ್ಳಿಯಲ್ಲಿ ವಾಸವಿದ್ದ. ಈ ಮಾಹಿತಿ ಅರಿತ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯವರಾದ ಮುತ್ತುರಾಜ್,ಸಂಚಾರ ಮತ್ತು ಅಪರಾಧ ಡಿಸಿಪಿಯವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಅರುಣ್ ರವರು ತಮ್ಮ ಸಿಬ್ಬಂದಿಗಳಾದ ಶೇಖರ್ ಹಾಗೂ ಸುರೇಶ್ ರವರೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *