ಕಾಫಿತೋಟದಲ್ಲಿಸಾವನ್ನಪ್ಪಿದ_ಹುಲಿ
- TV10 Kannada Exclusive
- January 11, 2024
- No Comment
- 294
ಬಾಳೆಲೆ ಹೋಬಳಿ ಕೊಟ್ಟಗೇರಿ ಗ್ರಾಮದ ದಿಲ್ಲು ತಿಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ
ಅಂದಾಜು 14 ವರ್ಷ ಪ್ರಾಯದ ಹುಲಿಯ ಕಳೇಬರ ಪತ್ತೆಯಾಗಿದೆ. ತೋಟದ ಮಾಲೀಕರು ನೀಡಿದ ಮಾಹಿತಿ ಮೇರೆಗೆ ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ಆರ್‌ಎಫ್‌ಓ ಶಂಕರಪ್ಪ, ಡಿಆರ್‌ಎಫ್‌ಓ ದಿವಾಕರ್, ತಿತಿಮತಿ ವಲಯ ಡಿಆರ್‌ಎಫ್‌ಓ ರವಿಕಿರಣ್, ಚೇತನ್, ಕಲ್ಲಳ್ಳ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿತ್ರಾಣದಿಂದ ಹುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.