ವಿವಾಹ ಮೊದಲರಾತ್ರಿಯಲ್ಲಿ ಗಂಡನಿಗೆ ಪಾರ್ಶ್ವವಾಯು ಅಟ್ಯಾಕ್…8 ವರ್ಷ ಸಂಸಾರ ನಡೆಸಿದ ಪತ್ನಿ ನೇಣಿಗೆ…
- Crime
- January 16, 2024
- No Comment
- 468
ಮೈಸೂರು,ಜ16,Tv10 ಕನ್ನಡ
ಮೊದಲರಾತ್ರಿಯಲ್ಲಿ ಪಾರ್ಶ್ವವಾಯು ಖಾಯಿಲೆಗೆ ತುತ್ತಾದ ಪತಿಯ ಜೊತೆ 8 ವರ್ಷ ಸಂಸಾರ ನಡೆಸಿದ ಗೃಹಿಣಿ ನೇಣಿಗೆ ಶರಣಾದ ಘಟನೆ ಮೈಸೂರಿನ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಮೂಲದ ಶೃತಿ (28) ಮೃತ ದುರ್ದೈವಿ.ಹಾಸನದ ಚಿಟ್ಟನಹಳ್ಳಿ ಗ್ರಾಮದ ಶೃತಿ 8 ವರ್ಷಗಳ ಹಿಂದೆ ಇಲವಾಲದ ಚಂದು ಎಂಬಾತನನ್ನ ವಿವಾಹವಾದರು.ವೃತ್ತಿಯಲ್ಲಿ ಸೋಲಾರ್ ಮೆಕ್ಯಾನಿಕ್ ಆಗಿದ್ದ ಚಂದು ವಿವಾಹವಾದ ಮೊದಲ ರಾತ್ರಿಯಲ್ಲೇ ಪಾರ್ಶ್ವವಾಯು ಅಟ್ಯಾಕ್ ಆಗಿದೆ.ಹೀಗಿದ್ದೂ ಚಂದು ಜೊತೆ ಶೃತಿ ಸಂಸಾರ ನಡೆಸಿ ಒಂದು ಮಗುವಿನ ತಾಯಿ ಆಗಿದ್ದರು.ಕಳೆದ ಎರಡು ವರ್ಷಗಳಿಂದ ಚಂದುಗೆ ಪಾರ್ಶ್ವವಾಯು ಖಾಯಿಲೆ ಪ್ರಮಾಣ ಹೆಚ್ಚಾಗಿದೆ.ಮತ್ತೊಂದೆಡೆ ಶೃತಿಗೆ ಆರೋಗ್ಯ ಸಹ ಕೈಕೊಟ್ಟಿದೆ.ಜೀವನದಲ್ಲಿ ಜಿಗುಪ್ಸೆ ಹೊಂದಿದ ಶೃತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…