
ಪಾರ್ಟ್ ಟೈಂ ಜಾಬ್ ಆಮಿಷ…ವೃದ್ದನಿಗೆ 17.94 ಲಕ್ಷ ಪಂಗನಾಮ…
- Crime
- January 16, 2024
- No Comment
- 196
ಮೈಸೂರು,ಜ16,Tv10 ಕನ್ನಡ
ಪಾರ್ಟ್ ಟೈಂ ನಲ್ಲಿ ಕೆಲಸ ಮಾಡುವ ಆಮಿಷವೊಡ್ಡಿ ನಿವೃತ್ತ ವ್ಯಕ್ತಿಯೋರ್ವರಿಗೆ 17.94 ಲಕ್ಷ ವಂಚಿಸಿದ ಪ್ರಕರಣ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ನಾಯ್ಡುನಗರ ನಿವಾಸಿ ನಾಗೇಶ್ (67) ವಂಚನೆಗೆ ಒಳಗಾದವರು.ಟೆಲಿಗ್ರಾಂ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿ ಪಾರ್ಟ್ ಡೈಂ ಕೆಲಸದ ಆಮಿಷ ತೋರಿಸಿದ್ದಾನೆ.ಹೋಟೆಲ್ ರೆಸ್ಟೋರೆಂಟ್ ಗಳಿಗೆ ರಿವ್ಯೂಸ್ ಹಾಕಿದ್ರೆ 50 ರೂ ಕಮೀಷನ್ ನೀಡುವುದಾಗಿ ನಂಬಿಸಿದ್ದಾನೆ.ಪ್ರಾರಂಭದಲ್ಲಿ ರಿವ್ಯೂಸ್ ಹಾಕಿದ ನಾಗೇಶ್ ರವರಿಗೆ 4300/- ಕಮೀಷನ್ ಬಂದಿದೆ.ನಂತರ ಪ್ರೀ ಪೇಡ್ ಟಾಸ್ಕ್ ನೀಡಿದ ವ್ಯಕ್ತಿ 40 % ಕಮೀಷನ್ ಆಸೆ ತೋರಿಸಿ ಹಂತಹಂತವಾಗಿ 17,94,997/- ರೂ ಪಡೆದು ಕಮೀಷನ್ ಕೊಡದೆ ವಂಚಿಸಿದ್ದಾನೆ.ಈ ಸಂಭಂಧ ನಾಗೇಶ್ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…