ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿ ಸೆರೆ…
- TV10 Kannada Exclusive
- January 31, 2024
- No Comment
- 89
ನಂಜನಗೂಡು,ಜ31,Tv10 ಕನ್ನಡ
ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿಯನ್ನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು 24 ಗಂಟೆ ಒಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದ ನಾಗೇಂದ್ರ ಎಂಬುವರ ಜಮೀನಿನಲ್ಲಿ ಭಾರಿ ಗಾತ್ರದ ಹೆಣ್ಣು ಹುಲಿ ಪ್ರತ್ಯಕ್ಷವಾಗಿದೆ. ಜಮೀನಿನ ಬಳಿ ತೆರಳಿದ್ದ ಗ್ರಾಮದ ಸುರೇಶ ಮತ್ತು ನಂಜುಂಡ ಎಂಬುವರು ಹುಲಿಯನ್ನು ನೋಡಿ ಚಿರಾಟ ಮಾಡಿದ್ದಾರೆ. ಕಾಡಿನತ್ತ ಹೆಜ್ಜೆ ಹಾಕಲು ಮುಂದಾದ ಹುಲಿ ಸುರೇಶ್ ಮತ್ತು ನಂಜುಂಡ ಮೇಲೆರಗಿ ಗಂಭೀರ ಗಾಯಗೊಳಿಸಿ ಪರಾರಿಯಾಗಿದೆ. ಗ್ರಾಮಸ್ಥರು ಓಂಕಾರ ಹಾಗೂ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರ ಮಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಂರಕ್ಷಣಾ ಪ್ರಾಧಿಕಾರ ನವ ದೆಹಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ರವರ ಆದೇಶದ ಮೆರೆಗೆ 24 ಗಂಟೆಗಳು ಕಳೆಯುವುದರ ಒಳಗಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿ ಹೆಣ್ಣು ಹುಲಿಯನ್ನು ಸೆರೆ ಹಿಡಿದು ಮೈಸೂರಿನ ಕೂರ್ಗಳಿಯ ಹುಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.ಹುಲಿ ಸೆರೆಯಿಂದ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ…