ಸಾಲಗಾರರ ಹಾವಳಿಗೆ ಹೆದರಿ ನಾಪತ್ತೆಯಾದ ಕುಟುಂಬ ಸೇಫ್…ಸುರಕ್ಷಿತವಾಗಿ ಹಿಂದಿರುಗಿದ ಫ್ಯಾಮಿಲಿ… ಡೆತ್ ನೋಟ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆಯಾಗಿದ್ದ 5 ಮಂದಿ…
- TV10 Kannada Exclusive
- February 4, 2024
- No Comment
- 520
ಮೈಸೂರು,ಫೆ4,,Tv10 ಕನ್ನಡ
ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆಯಾದ ಪ್ರಕರಣ ಸುಖಾಂತ್ಯ ಕಂಡಿದೆ.ಮಿಸ್ಸಿಂಗ್ ಆದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸಂಪರ್ಕಕ್ಕೆ ದೊರೆತ ಕುಟುಂಬ ಮತ್ತೆ ಮೈಸೂರಿಗೆ ವಾಪಸ್ ಬಂದಿದ್ದಾರೆ.ಸಾಲಗಾರರ ಧಂಕಿ ಹೆದರಿದ್ದ ಕುಟುಂಬ ಇದೀಗ ಸೇಫ್ ಆಗಿ ಹಿಂದಿರುಗಿದೆ.
ಮೈಸೂರು ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ರವರು ಸಾಲಗಾರರ ಕಾಟಕ್ಕೆ ಬೇಸತ್ತು ಜನವರಿ 20 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.ಸ್ನೇಹಿತರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಇಡೀ ಕುಟುಂಬ ನಾಪತ್ತೆಯಾಗಿತ್ತು.ಈ ಸಂಭಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು.ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಂಭಂಧಿಕರು ಆತಂಕ ವ್ಯಕ್ತಪಡಿಸಿದ್ದರು.ಬೆಂಗಳೂರಿನ ಸ್ನೇಹಿತರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ಮಹೇಶ್ ಕುಟುಂಬ ಸುರಕ್ಷಿತವಾಗಿ ಹಿಂದಿರುಗಿದೆ.ಮಹೇಶ್ ಸಂಭಂಧಿಕರು ಹಾಗೂ ಸ್ನೇಹಿತರ ಆತಂಕ ದೂರವಾಗಿದೆ.
ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್ ರವರು ವೀರೇಶ್ ಎಂಬುವರ ವ್ಯವಹಾರಕ್ಕೆ ಸಾಥ್ ನೀಡಿದ್ದಾರೆ.ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದಿದ್ದ.ವ್ಯವಹಾರದಲ್ಲಿ ನಷ್ಟವಾದ ಕಾರಣ ವೀರೇಶ್ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ.ವೀರೇಶ್ ಗೆ ಸಾಲ ನೀಡಿದ ಮಂದಿ ಮಹೇಶ್ ಮೇಲೆ ಒತ್ತಡ ಹೇರಿದ್ದರು.ಪ್ರಾರಂಭದಲ್ಲಿ 2 ಲಕ್ಷಕ್ಕೆ ಗ್ಯಾರೆಂಟಿ ಕೊಟ್ಟ ಮಹೇಶ್ ನಂತರ ಚಕ್ರವ್ಯೂಹದಲ್ಲಿ ಸಿಲುಕಿದ್ದರು.ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ತಮ್ಮ ಸ್ನೇಹಿತರಾದ ದರ್ಶನ್ ಎಂಬುವರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಮಾಡಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ.ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ.ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ.ನಾವು ಕೆರೆ ಅಥವಾ ಭಾವಿಗೆ ಬೀಳುತ್ತೇವೆ.ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ.ಅವರನ್ನಂತೂ ಬಿಡಬೇಡಿ ಎಂದು ರಂಜಿತಾ,ದಿನೇಶ್,ಚಂದ್ರು ಹಾಗೂ ನೇತ್ರ ಎಂಬುವರ ಹೆಸರನ್ನ ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿ ನಾಪತ್ತೆಯಾಗಿದ್ದರು. ಜನವರಿ 20 ರಂದು ಕಾಣೆಯಾದ ಕುಟುಂಬ ಸುರಕ್ಷಿತವಾಗಿ ಹಿಂದಿರುಗಿದೆ…