
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರಿಕೆ ಆಮಿಷ…ವ್ಯಕ್ತಿಗೆ 55 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…
- TV10 Kannada Exclusive
- February 4, 2024
- No Comment
- 296
ಮೈಸೂರು,ಫೆ4,Tv10 ಕನ್ನಡ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವ ಆಮಿಷ ನೀಡಿ ವ್ಯಕ್ತಿಯೊಬ್ಬರಿಗೆ 55 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ದ FIR ದಾಖಲಾಗಿದೆ.ಬಾಬಯ್ಯ ಸ್ವಾಮಿ ನಾಯ್ಡು ಹಾಗೂ ಬ್ರಹ್ಮಾನಂದ ರೆಡ್ಡಿ ಎಂಬುವರ ವಿರುದ್ದ ವಂಚನೆಗೆ ಒಳಗಾದ ಗಜಾನನ ಭಟ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಜಾನನ ಭಟ್ ರವರಿಗೆ ರವಿ ಎಂಬುವರ ಮೂಲಕ ಬಾಬಯ್ಯ ಸ್ವಾಮಿ ನಾಯ್ಡು ಹಾಗೂ ಬ್ರಹ್ಮಾನಂದ ರೆಡ್ಡಿ ಪರಿಚಯವಾಗಿದ್ದಾರೆ.ಇಬ್ಬರೂ ಸೇರಿ ವಿಜಯನಗರದಲ್ಲಿ ನಯೋನಿ ಇನ್ಫ್ರಾಸ್ಟ್ರಕ್ಚರ್ ಪ್ರೈ ಲಿ.ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಯಲ್ಲಿ ಪಾಲುದಾರಿಕೆ ನೀಡುವುದಾಗಿ ಆಮಿಷವೊಡ್ಡಿ ಗಜಾನನ ಭಟ್ ರಿಂದ 55 ಲಕ್ಷ ಪಡೆದು ರಾತ್ರೋ ರಾತ್ರಿ ನಾಪತ್ತೆಯಾಗಿದ್ದಾರೆ.ಬಾಬಯ್ಯ ಸ್ವಾಮಿ ನಾಯ್ಡು ಹಾಗೂ ಬ್ರಹ್ಮಾನಂದರೆಡ್ಡಿ ವಿರುದ್ದ ಗಜಾನನ ಭಟ್ ವಂಚನೆ ಪ್ರಕರಣ ದಾಖಲಿಸಿದ್ದಾರೆ…