ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಲೆ…ಪತಿ ಅಂದರ್…

ಮೈಸೂರು,ಫೆ6,Tv10 ಕನ್ನಡ

ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಂದ ಪತಿರಾಯ ಪೊಲೀಸರ ಅತಿಥಿಯಾಗಿದ್ದಾನೆ.ಮೈಸೂರಿನ ರಾಜೀವ್ ನಗರದಲ್ಲಿ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ನವೀದಾಬಿ ಎಂಬುವರೇ ಪತಿ ಅಕ್ಬರ್ ಆಲಿ ಕೃತ್ಯಕ್ಕೆ ಸಿಲುಕಿ ಕೊಲೆಯಾದವರು.

ಮಂಡ್ಯ ಜಿಲ್ಲೆಯ ಅಕ್ಬರ್ ಆಲಿಯನ್ನ ನವೀದಾ ಬಿ 13 ವರ್ಷಗಳ ಹಿಂದೆ ವಿವಾಹವಾಗಿದ್ದರು.ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ ಸಂಸಾರ ನೆಲೆಸಿತ್ತು.ಮಂಡ್ಯಾದಲ್ಲಿ ಆಟೋ ಓಡಿಸುತ್ತಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ ಪತ್ನಿ ಮನೆಯವರು ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡಿದ್ದರು.ನಂತರ ಗೂಡ್ಸ್ ಆಟೋ,ಪ್ರಾವಿಷನ್ ಸ್ಟೋರ್ಸ್,ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಅಕ್ಬರ್ ಆಲಿಗೆ ಪತ್ನಿ ನವೀದಾ ಬಿ ಮನೆಯವರು ಆರ್ಥಿಕ ಸಹಾಯ ನೀಡಿದ್ದರು.ಎಲ್ಲಾ ಬಂಡವಾಳವನ್ನ ತಿಂದು ತೇಗಿದ್ದ ಅಕ್ಬರ್ ಆಲಿ ಮತ್ತಷ್ಟು ಸಾಲಗಾರನಾಗಿದ್ದ.ತಾನು ಮಾಡಿದ ಸಾಲ ತೀರಿಸಲು ಪತ್ನಿಯ ಮೊರೆ ಹೋಗುತ್ತಿದ್ದ.ಆಗಾಗ ನವೀದಾ ಬಿ ರವರು ನಡೆಸುತ್ತಿದ್ದ ಪುಟ್ಟ ಅಂಗಡಿಯಲ್ಲಿ ದುಡಿದು ಗಂಡನ ಸಾಲ ತೀರಿಸುತ್ತಿದ್ದರು.ಒಂದೆಡೆ ಸಾಲ ತೀರಿಸಿದರೆ ಮತ್ತೊಂದೆಡೆ ಸಾಲ ಮಡುತ್ತಿದ್ದ ಪತಿ ಜೊತೆ ಪತ್ನಿ ಆಗಾಗ ಗಲಾಟೆ ಮಾಡುತ್ತಿದ್ದರು.ಭಾನುವಾರ ಇದೇ ವಿಚಾರದಲ್ಲಿ ಗಲಾಟೆ ಆಗಿದೆ.ಇದ್ದಕ್ಕಿದ್ದಂತೆ ನವೀದಾ ಬೀ ರವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.ಅಕ್ಬರ್ ಆಲಿಯನ್ನ ಪ್ರಶ್ನಿಸಿದಾಗ ತಂದೆ ಮನೆಗೆ ಹೋಗಿದ್ದಾಳೆ,ಅಂಗಡಿಯಲ್ಲಿ ಇದ್ದಾಳೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದ.ಅಕ್ಕಪಕ್ಕದ ಮನೆಯವರನ್ನ ಕೇಳಿದಾಗ ಇಬ್ಬರ ನಡುವೆ ನಡೆದ ಗಲಾಟೆ ವಿಚಾರ ತಿಳಿಸಿದರು.ಅನುಮಾನಗೊಂಡು ಬೀಗ ಹಾಕಿದ್ದ ಮನೆ ಬಾಗಿಲನ್ನ ಒಡೆದು ನೋಡಿದಾಗ ನವೀದಾ ಬೀ ಅಸ್ವಸ್ಥರಾಗಿ ಕುಳಿತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.ಕುತ್ತಿಗೆ ಮೇಲೆ ಗಾಯದ ಗುರುತುಗಳು ಕಂಡು ಬಂದಿದೆ.ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅಕ್ಬರ್ ಆಲಿಯನ್ನ ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *