ಪೊಲೀಸರು ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳು ನಿಯಮಾನುಸಾರ ನಾಶ…
- TV10 Kannada Exclusive
- February 9, 2024
- No Comment
- 75
ದಾಬಸ್ ಪೇಟ್,ಫೆ9,Tv10 ಕನ್ನಡ
ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮಾನ್ಯ ಗೃಹ ಸಚಿವರ ಸಮ್ಮುಖದಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿರುವ Karnataka waste management project ಘಟಕದಲ್ಲಿ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಮಾದಕ ದ್ರವ್ಯಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೆ ಅನುಮತಿಯಾಗಿದ್ದ ಒಟ್ಟು 38 ಪ್ರಕರಣಗಳಲ್ಲಿ 134 ಕೆಜಿ 291 ಗ್ರಾಂ ಗಾಂಜಾ, 228 ಗ್ರಾಂ MDMA ಹಾಗೂ 28 ಮಿಲಿ ಗ್ರಾಂ Methamphetamine ಮಾದಕ ದ್ರವ್ಯಗಳನ್ನು ನಿಯಮಾನುಸಾರ ಡ್ರಗ್ ಡಿಸ್ಪೋಸಲ್ ಕಮಿಟಿಯ ಮುಖಾಂತರ ನಾಶಪಡಿಸಲಾಗಿರುತ್ತದೆ.ಕಾರ್ಯಕ್ರಮದಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ ಐಪಿಎಸ್, ಡ್ರಗ್ ಡಿಸ್ಪೋಸಲ್ ಕಮಿಟಿಯ ಛೇರ್ಮನ್ ರವರಾದ ಡಿಸಿಪಿ ಎಸ್ ಜಾನವಿ, ಕಮಿಟಿಯ ಸದಸ್ಯರಾದ ಎಸಿಪಿ ಸಿಸಿಬಿ ಘಟಕ, ಪೊಲೀಸ್ ನಿರೀಕ್ಷಕರು ಸಿಸಿಆರ್‌ಬಿ ಘಟಕ ಹಾಗೂ ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು…