ಕರಾಟೆ ಏಟಿಗೆ ಚಿಕ್ಕಪ್ಪ ಡೆತ್…ಜಮೀನು ವಿಚಾರದಲ್ಲಿ ದಾಯಾದಿಗಳ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

  • Crime
  • February 9, 2024
  • No Comment
  • 685

ನಂಜನಗೂಡು,ಫೆ9,Tv10 ಕನ್ನಡ

ಕರಾಟೆ ಕಲಿಯ ಹೊಡೆತಕ್ಕೆ ಚಿಕ್ಕಪ್ಪ ಕೊನೆಉಸಿರೆಳೆದ ಘಟನೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ನಡೆದಿದೆ.ಜಮೀನು ವಿಚಾರದಲ್ಲಿ ದಾಯಾದಿಗಳ ನಡುವೆ ನಡೆದ ಗಲಾಟೆ ಓರ್ವರ ಕೊಲೆಯಲ್ಲಿ ಅಂತ್ಯವಾಗಿದೆ.ಅಣ್ಣತಮ್ಮಂದಿರ ಗಲಾಟೆಯಲ್ಲಿ ಕೊಲೆಯಾದವರು ಕರಿಶೆಟ್ಟಿ.ಈ ಸಂಭಂಧ ಅಣ್ಣ ಶಿವಣ್ಣ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕಾರ್ಯಗ್ರಾಮದ ಸರ್ವೆ ನಂ.91 ಮತ್ತು 92 ರ ಜಮೀನಿನ ವಿಚಾರದಲ್ಲಿ ಕರಿಶೆಟ್ಟಿ ಹಾಗೂ ಶಿವಣ್ಣಶೆಟ್ಟಿ ನಡುವೆ ಎಸಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.ಈ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ದ್ವೇಷ ಬೆಳೆದಿದೆ.ನಿನ್ನೆ ರಾತ್ರಿ ಇದೇ ವಿಚಾರದಲ್ಲಿ ಶಿವಣ್ಣಶೆಟ್ಟಿ ಹಾಗೂ ಮಗನಾದ ಸಿದ್ದಪ್ಪಾಜಿ ತೋಟದ ಮನೆಗೆ ಬಂದು ಕಿರಿಕ್ ತೆಗೆದಿದ್ದಾರೆ.ಸಿದ್ದಪ್ಪಾಜಿ ಕರಾಟೆ ಪಟುವಾಗಿದ್ದು ಕರಿಶೆಟ್ಟಿ ಎದೆಗೆ ಗುದ್ದಿದ್ದಾನೆ.ಇದಕ್ಕೆ ತಂದೆ ಶಿವಣ್ಣಶೆಟ್ಟಿ ಸಹ ಸಾಥ್ ನೀಡಿದ್ದಾರೆ.ತಂದೆಯ ರಕ್ಷಣೆಗೆ ಬಂದ ಮಗ ಕುಮಾರಶೆಟ್ಟಿ ಮೇಲೂ ಹಲ್ಲೆ ನಡೆಸಿದ್ದಾರೆ.ತಂದೆ ಮಗ ನಡೆಸಿದ ಹಲ್ಲೆಗೆ ಕರಿಶೆಟ್ಟಿ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ.ಈ ಸಂಭಂಧ ಶಿವಣ್ಣ ಶೆಟ್ಟಿ,ಸಿದ್ದಪ್ಪಾಜಿ,ಮಲ್ಲಿಗಮ್ಮ ಹಾಗೂ ನೀಲಮ್ಮ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *