100 ದಿನ ಪೂರೈಸಿದ ಕಾವೇರಿಗಾಗಿ ಹೋರಾಟ…ಪ್ರತಿಭಟನಾಕಾರರ ಕೂಗಿಗೆ ಸ್ಪಂದಿಸದ ಸರ್ಕಾರಗಳು…ಕಣ್ಮುಚ್ಚಿ ಕುಳಿತ ರಾಜ್ಯ ಹಾಗೂ ಕೇಂದ್ರ ನಾಯಕರು…ತಿರುಗಿಯೂ ನೋಡದ ಅಧಿಕಾರಿಗಳು…
- TV10 Kannada Exclusive
- February 14, 2024
- No Comment
- 181
ಮೈಸೂರು,ಫೆ14,Tv10 ಕನ್ನಡ
ಕಾವೇರಿ ಕ್ರಿಯಾ ಸಮಿತಿ ಹೋರಾಟ 100 ದಿನ ಪೂರೈಸಿದೆ.ಕಾವೇರಿ ನಮ್ಮದು ಎಂಬ ಘೋಷಣೆಗೆ ಸರ್ಕಾರ ಸ್ಪಂದಿಸುತ್ತಿಲ್ಲ.ಪ್ರತಿಭಟನಾಕಾರರ ಕೂಗು ಇನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಣ್ಣು ತೆರೆಸಲಾಗಿಲ್ಲ.ಪ್ರತಿಭಟನಾಕಾರರ ಆಕ್ರೋಷ ಸಂಭಂಧಪಟ್ಟವರಿಗೆ ತಲುಪಲು ಇನ್ನೆಷ್ಟು ದಿನ ಹೋರಾಟ ಮಾಡಬೇಕು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರ ಮುಂದಿದೆ.
ಮೈಸೂರಿನ ದೊಡ್ಡಗಡಿಯಾರ ವೃತ್ತದಲ್ಲಿ ಕಾವೇರಿಗಾಗಿ ಶುರುವಾದ ಹೋರಾಟ ಶತದಿನಗಳನ್ನ ಪೂರೈಸಿದೆ.ನಿರಂತರ ಹೋರಾಟ ನಡೆಸಿಕೊಂಡು ಬಂದರೂ ಇದುವರೆಗೆ ಕಾವೇರಿ ನೀರು ಸ್ಥಗಿತವಾಗಿಲ್ಲ.ಪ್ರತಿದಿನ ಹೋರಾಟಗಾರರು ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಕಣ್ತೆರೆಸಲು ಅವಿರತ ಶ್ರಮ ವಹಿಸುತ್ತಿದ್ದರೂ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ.100 ದಿನಗಳಲ್ಲಿ ಕೇವಲ ಬೆರಳೆಣಿಕೆ ಮಂದಿ ಜನಪ್ರತಿನಿಧಿಗಳು ಹೋರಾಟದಲ್ಲಿ ಭಾಗವಹಿಸಿ ತೋರಿಕೆಗಾಗಿ ಬೆಂಬಲ ಸೂಚಿಸಿ ತೆಪ್ಪಗಾಗಿದ್ದಾರೆ.ಈಗಾಗಲೇ ಬೇಸಿಗೆ ಶುರುವಾಗಿದೆ.ತಮಿಳುನಾಡಿಗೆ ಹೀಗೇ ನೀರು ಬಿಡುಗಡೆ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದರೂ ಪ್ರಯೋಜನವಾಗಿಲ್ಲ.ಹಾಗಿದ್ರೆ ಶಾಂತಿಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸುವುದಿಲ್ಲವೇ ಎಂ ಜಿಜ್ಞಾಸೆ ಮೂಡುತ್ತಿದೆ.ಪ್ರತಿಭಟನಾಕಾರರು ಸಹನೆ ಕಳೆದುಕೊಳ್ಳುವ ಮುನ್ನ ಸರ್ಕಾರಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸುವತ್ತ ಗಂಭೀರವಾಗಿ ಚಿಂತಿಸಬೇಕಿದೆ.ಕೇಂದ್ರ ಸರ್ಕಾರವೂ ಸಹ ಮಧ್ಯ ಪ್ರವೇಶಿಸಿ ಪರಿಹಾರ ಒದಗಿಸಬೇಕಿದೆ.ಹೋರಾಟ ಶುರುವಾಗಿ 100 ದಿನಗಳಾದರೂ ಜಿಲ್ಲಾ ಉಸ್ತುವಾರಿಗಳು ಸ್ಪಂದಿಸಿಲ್ಲದಿರುವುದು ಶೋಚನೀಯ.ಕನಿಷ್ಟಪಕ್ಷ ಹೋರಾಟಗಾರರೊಂದಿಗೆ ಸಭೆ ನಡೆಸಿ ಅಭಯ ನೀಡುವ ಸೌಜನ್ಯವೂ ಜಿಲ್ಲಾ ಉಸ್ತುವಾರಿಗಳಿಗೆ ಬಾರದಿರುವುದು ಖಂಡನೀಯ.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಹ ಇತ್ತ ತಿರುಗಿ ನೋಡಿಲ್ಲ.ಇನ್ನಾದರೂ ಕಾವೇರಿ ಕ್ರಿಯಾ ಸಮಿತಿ ಹೋರಾಟಕ್ಕೆ ನ್ಯಾಯ ಸಿಗುವುದೇ…? ಕಾವೇರಿ ನೀರು ಸ್ಥಗಿತಗೊಳಿಸುವ ಮೂಲಕ ಕಾವೇರಿ ಹೋರಾಟಗಾರರ ಕೂಗಿಗೆ ಸರ್ಕಾರ ಸ್ಪಂದಿಸಲಿ…