ವಾಟ್ಸಪ್ ಡೆತ್ ನೋಟ್ ಬರೆದು ಮೆಕ್ಯಾನಿಕಲ್ ಇಂಜಿನಿಯರ್ ಮಿಸ್ಸಿಂಗ್…ನಾಲ್ಕು ದಿನಗಳ ನಂತರ ವಾಪಸ್…

ವಾಟ್ಸಪ್ ಡೆತ್ ನೋಟ್ ಬರೆದು ಮೆಕ್ಯಾನಿಕಲ್ ಇಂಜಿನಿಯರ್ ಮಿಸ್ಸಿಂಗ್…ನಾಲ್ಕು ದಿನಗಳ ನಂತರ ವಾಪಸ್…

ಮೈಸೂರು,ಫೆ14,Tv10 ಕನ್ನಡ

ಕಂಪನಿಯ ಚೀಫ್ ಗೆ ವಾಟ್ಸಾಪ್ ಡೆತ್ ನೋಟ್ ಮೆಸೇಜ್ ಹಾಕಿ ಮೆಕ್ಯಾನಿಕಲ್ ಇಂಜಿನಿಯರ್ ಮಿಸ್ಸಿಂಗ್ ಆಗಿದ್ದು,ನಾಲ್ಕು ದಿನಗಳ ನಂತರ ಹಿಂದಿರುಗಿದ ಘಟನೆ ಬೆಳಕಿಗೆ ಬಂದಿದೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇದರ್ ಬ್ಲಾಕ್ ನಲ್ಲಿ ಘಟನೆ ನಡೆದಿದೆ.ಸೈಯದ್ ಮೊಹಮದ್ ರವರ ಮಗ ಸೈಯದ್ ಶರಣ್(27) ಮಿಸ್ಸಿಂಗ್ ಆಗಿದ್ದ ಮೆಕ್ಯಾನಿಕಲ್ ಇಂಜಿನಿಯರ್ ನಾಲ್ಕು ದಿನಗಳ ನಂತರ ಸೇಫ್ ಆಗಿ ಹಿಂದಿರುಗಿದ್ದಾರೆ.ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸೈಯದ್ ಶರಣ್ ಫೆ.10 ರಂದು ಮೈಸೂರಿಗೆ ಬಂದಿದ್ದಾರೆ.ಫೆ.11 ರಂದು ಮಟನ್ ತರುವುದಾಗಿ ಮನೆಯಲ್ಲಿ ತಿಳಿಸಿ ಹೊರಟವರು ಮತ್ತೆ ವಾಪಸ್ ಬಂದಿಲ್ಲ.ಸ್ನೇಹಿತರು ಹಾಗೂ ಸಂಭಂಧಿಕರಿಂದ ಯಾವುದೇ ಮಾಹಿತಿ ಸಿಗಲಿಲ್ಲ.ಕೊನೆಗೆ ಕಂಪನಿಯ ಚೀಫ್ ಗೆ ಸೈಯದ್ ಶರಣ್ ವಾಟ್ಸಾಪ್ ಮೆಸೇಜ್ ನಲ್ಲಿ ಸೂಸೈಡ್ ಮೆಸೇಜ್ ಕಳಿಸಿರುವ ಮಾಹಿತಿ ಬಂದಿದೆ.ನಾಳೆಯಿಂದ ಆಫೀಸ್ ಗೆ ಬರುವುದಿಲ್ಲ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ.ಯಾರಿಗೂ ಹೇಳಬೇಡಿ ಎಂದು ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾರೆ.ಈ ಸಂಭಂಧ ತಂದೆ ಸೈಯದ್ ಮೊಹಮದ್ ಮಂಡಿ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.ಫೆ.14 ರಂದು ಬೆಳಗಾಂ ನಲ್ಲಿ ಸೈಯದ್ ಶರಣ್ ಪತ್ತೆಯಾಗಿದ್ದಾರೆ.ಮೈಸೂರಿಗೆ ತಲುಪಿರುವ ಸೈಯದ್ ಶರಣ್ ನನ್ನ ಓದಿಗೆ ಸರಿಯಾಗಿ ಕೆಲಸ ಸಿಕ್ಕಿಲ್ಲವೆಂಬ ಕಾರಣ ಬೇಸತ್ತು ಇಂತಹ ನಿರ್ಧಾರ ಕೈಗೊಂಡಿದ್ದರೆಂದು ತಂದೆಗೆ ತಿಳಿಸಿದ್ದಾರೆ.ಸಧ್ಯ ಮಿಸ್ಸಿಂಗ್ ಆಗಿದ್ದ ಸೈಯದ್ ಶರಣ್ ಸೇಫ್ ಆಗಿ ಮನೆಗೆ ಹಿಂದಿರುಗಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *