ಕರಿಮಣಿ ಮಾಲೀಕ ನೀನಲ್ಲ ಎಂದು ಸೋದರಮಾವನೊಂದಿಗೆ ರೀಲ್ಸ್ ಮಾಡಿದ ಪತ್ನಿ…ಪತಿ ನೇಣಿಗೆ ಶರಣು…
- TV10 Kannada Exclusive
- February 15, 2024
- No Comment
- 768
ಚಾಮರಾಜನಗರ,ಫೆ15,Tv10 ಕನ್ನಡ
ಕರಿಮಣಿ ಮಾಲೀಕ ನೀನಲ್ಲ ಎಂದು ಸೋದರಮಾವನೊಂದಿಗೆ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿದ ಪತ್ನಿಯ ವರ್ತನೆಗೆ ಬೇಸತ್ತು ಪತಿ ನೇಣಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ನಡೆದಿದೆ. ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ.
ಸೋದರ ಮಾವ ಮತ್ತು ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ಪತ್ನಿ ರೂಪಾ ರೀಲ್ಸ್ ಮಾಡಿದ್ದಳು.ಇದನ್ನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಗೆಳೆಯರು ಹಾಗೂ ಸಂಭಂಧಿಕರು ಕುಮಾರ್ ಗಮನಕ್ಕೆ ತಂದಿದ್ದಾರೆ.ರೀಲ್ಸ್ ಡಿಲೀಟ್ ಮಾಡುವಂತೆ ಪತ್ನಿಗೆ ಕುಮಾರ್ ಮನವಿ ಮಾಡಿದ್ದಾನೆ.ಪತಿಯ ಮನವಿಗೆ ರೂಪಾ ಕ್ಯಾರೆ ಎಂದಿಲ್ಲ. ಇದರಿಂದ
ಮನನೊಂದ ಪತಿ ಕುಮಾರ್ ಮನೆ ಮುಂದಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…