ಮೈಸೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಡಾ.ಅಶ್ವಿನಿ ಶರತ್ ರಿಂದ ಏಕಾಂಗಿ ಹೋರಾಟ…ಗಾಂಧಿನಗರ ಅಭಿವೃದ್ದಿಗೆ ಆಗ್ರಹ…
- TV10 Kannada Exclusive
- February 17, 2024
- No Comment
- 156
ಮೈಸೂರು,ಫೆ17,Tv10 ಕನ್ನಡ
ವಾರ್ಡ್ ನಂ 26 ರ ವ್ಯಾಪ್ತಿಯಲ್ಲಿರುವ ಗಾಂಧಿನಗರವನ್ನ ಅಭಿವೃದ್ದಿಗೊಳಿಸಲು ಹೆಚ್ಚು ಅನುಮೋದನೆ ನೀಡುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಡಾ.ಅಶ್ವಿನಿ ಶರತ್ ರವರು ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು.ಮೈಸೂರು ಮಹಾನಗರ ಪಾಲಿಕೆ ವತಿಯಿಂದ 2023-24 ನೇ ಸಾಲಿನ ಪಾಲಿಕೆ ನಿಧಿಯಡಿ ಲಭ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಿದ್ದಪಡಿಸಿರುವ ಶೇ.24.10,ಶೇ 7.25 ಹಾಗೂ ಶೇ 5.00 ಕಾರ್ಯಕ್ರಮಗಳ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದಿದ್ದರೂ ಗಾಂಧಿನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನತೆಗೆ ಅನ್ಯಾಯವಾಗುತ್ತಿದೆ.ಈ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಕ್ರಿಯಾಯೋಜನೆಯಂತೆ ಗಾಂಧಿನಗರವನ್ನ ಅಭಿವೃದ್ದಿಪಡಿಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು…