ಚಿಕ್ಕಮ್ಮನ ಮಗಳ ಕೈಚಳಕ…45 ಗ್ರಾಂ ಚಿನ್ನಾಭರಣ ಕಳುವು…48 ಗಂಟೆಗಳಲ್ಲಿ ಆರೋಪಿ ಪೊಲೀಸರ ವಶಕ್ಕೆ…
- TV10 Kannada Exclusive
- February 25, 2024
- No Comment
- 238
ಮೈಸೂರು,ಫೆ25,Tv10 ಕನ್ನಡ
ಮನೆಯಲ್ಲಿ ಇಟ್ಟಿದ್ದ 45 ಗ್ರಾಂ ಚಿನ್ನದ ಆಭರಣಗಳನ್ನ ಕಳುವು ಮಾಡಿದ ಚಿಕ್ಕಮ್ಮನ ಮಗಳು ಪೊಲೀಸರ ಅತಿಥಿಯಾದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ನಡೆದಿದೆ.ರಾಧಾಶ್ರೀ (26) ಚಿನ್ನದ ಆಭರಣಗಳನ್ನ ಕಳುವು ಮಾಡಿದ ಆರೋಪಿ.ಸಿದ್ದಲಿಂಗಪುರದ ಜಾಹ್ನವಿ ರವರು ತಮ್ಮ ತಾಯಿ ಬಳಿಯಿಂದ ಪಡೆದಿದ್ದ 45 ಗ್ರಾಂ ತೂಕದ ಚಿನ್ನಾಭರಣಗಳನ್ನ ಪರ್ಸ್ ಒಂದರಲ್ಲಿ ಮನೆಯ ಕಿಟಕಿ ಬಳಿ ಇಟ್ಟು ಕೆಲಸಕ್ಕೆ ತೆರಳಿದ್ದರು.ಈ ವೇಳೆ ಮನೆಯಲ್ಲಿದ್ದ ಚಿಕ್ಕಮ್ಮನ ಮಗಳು ರಾಧಾಶ್ರೀ ಚಿನ್ನಾಭರಣ ಇದ್ದ ಪರ್ಸ್ ಕದ್ದು ಪರಾರಿಯಾಗಿದ್ದಾರೆ.ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ಜಾಹ್ನವಿ ರವರಿಗೆ ಚಿನ್ನಾಭರಣ ಇದ್ದ ಪರ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಕೂಡಲೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ರಾಧಾಶ್ರೀ ವಿರುದ್ದ ದೂರು ನೀಡಿದ್ದಾರೆ.ತನಿಖೆ ಕೈಗೊಂಡ ಮೇಟಗಳ್ಳಿ ಠಾಣೆ ಪೊಲೀಸರು ರಾಧಾಶ್ರೀ ಯನ್ನ ವಿಚಾರಣೆಗೆ ಒಳಪಡಿಸಿದಾಗಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡು ಚಿನ್ನಾಭರಣ ಹಿಂದಿರುಗಿಸಿದ್ದಾಳೆ.ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…