ಸಿಸಿಬಿ ಪೊಲೀಸರ ಕಾರ್ಯಾಚರಣೆ…ಮಾರಕಾಸ್ತ್ರಗಳ ಸಮೇತ ರೌಡಿ ಶೀಟರ್ ಅಂದರ್…ಮೂರು ಡ್ರಾಗರ್ ವಶಕ್ಕೆ…

ಮೈಸೂರು,ಫೆ25,Tv10 ಕನ್ನಡ

ರೌಡಿಶೀಟರ್ ಗಳ ಹುಟ್ಟಡಗಿಸಲು ಮೈಸೂರು ಸಿಸಿಬಿ ಪೊಲೀಸ್ ಮಿಂಚಿನ ಕಾರ್ಯಾಚರಣೆ ನಡೆಸುತ್ತಿದೆ.ರೌಡಿಶೀಟರ್ ಗಳ ಚಲನವಲನಗಳ ಮೇಲೆ ನಿಗಾ ಇಡುತ್ತಿರುವ ಪೊಲೀಸರು ಸ್ವಲ್ಪ ಡೌಟ್ ಬಂದ್ರೂ ರೌಂಡ್ ಅಪ್ ಮಾಡುತ್ತಿದ್ದಾರೆ.ರೌಡಿಗಳ ಆಕ್ಟಿವಿಟಿಗಳ ಮೇಲೆ ಹದ್ದಿನ ಕಣ್ಣಿಟ್ಟ ಸಿಸಿಬಿ ಪೊಲೀಸರಿಗೆ ತಿಮಿಂಗಿಲವೊಂದು ಬಲೆಗೆ ಬಿದ್ದಿದೆ.ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಖಾತೆ ತೆಗೆಸಿಕೊಂಡಿರುವ ಜಾವೆದ್ ಖಾನ್@ ಸೈನೆಡ್ ಜಾವೆದ್ (42) ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.ಈತನ ಮೇಲೆ ಈಗಾಗಲೇ ಹಲವು ಪ್ರಕರಣಗಳಿದ್ದರೂ ಮತ್ತೊಂದು ಕೃತ್ಯಕ್ಕೆ ಸಂಚು ಹಾಕುತ್ತಿದ್ದ ವೇಳೆ ಸಿಸಿಬಿ ಟೀಂ ಅಟ್ಯಾಕ್ ಮಾಡಿ ವಶಕ್ಕೆ ಪಡೆದಿದೆ.ಸಿಕ್ಕಿಬಿದ್ದ ವೇಳೆ ಜಾವೇದ್ ಖಾನ್ ಬಳಿ ವಿವಿದ ನಮೂನೆಯ ಮೂರು ಡ್ರಾಗರ್ ಗಳ ದೊರೆತಿದೆ.ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ನಲ್ಲಿ ಡ್ರಾಗರ್ ಗಳನ್ನ ಇಟ್ಟುಕೊಂಡಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ರೌಡಿಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡುವಂತೆ ಸಿಸಿಬಿ ಪೊಲೀಸರಿಗೆ ಜವಾಬ್ದಾರಿ ನೀಡಲಾಗಿದೆ.ಠಾಣೆಗೆ ಕರೆಸಿ ಎಚ್ಚರಿಕೆ ಕೊಡುವ ಬದಲು ರೌಡಿಶೀಟರ್ ಗಳು ಇರುವ ಸ್ಥಳವನ್ನೇ ಹುಡುಕಿಕೊಂಡು ಹೋಗಿ ಪರಿಶೀಲನೆ ಮಾಡಬೇಕೆಂಬ ಜವಾಬ್ದಾರಿಯನ್ನ ಸಿಸಿಬಿ ಪೊಲೀಸರ ಹೆಗಲಿಗೆ ಹಾಕಲಾಗಿದೆ.ಇದೇ ವಿಚಾರದ ಹಿನ್ನಲೆ ಫೆ.23 ರ ರಾತ್ರಿ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಉನ್ನತಿನಗರದಲ್ಲಿ ಇನ್ಸ್ಪೆಕ್ಟರ್ ಪೂವಯ್ಯ ಮತ್ತು ಟೀಂ ರೌಂಡ್ಸ್ ಮಾಡುತ್ತಿದ್ದ ವೇಳೆ ಜಾವೆದ್ ಖಾನ್ @ ಸೈನೆಡ್ ಜಾವೆದ್ ಮಾರಕಾಸ್ತ್ರಗಳ ಸಮೇತ ಬಿದ್ದಿದ್ದಾನೆ.

2019 ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾವೆದ್ ಖಾನ್ ಪಿಸ್ತೂಲ್ ಮಾರಾಟ ಮಾಡುವ ಯತ್ನದಲ್ಲಿ ತಂಡದ ಜೊತೆ ಶಾಮೀಲಾಗಿದ್ದ ವೇಳೆ ಸಿಕ್ಕಿಬಿದ್ದಿದ್ದ.ಬೆಂಗಳೂರು ಸಿಸಿಬಿ ಪೊಲೀಸರು ಜಾವೆದ್ ಖಾನ್ ಸೇರಿದಂತೆ 6 ಮಂದಿಯನ್ನ ಬಂಧಿಸಿದ್ದರು.ಆರೋಪಿಗಳಿಂದ ಮೂರು ಪಿಸ್ತೂಲ್,ಒಂದು ರಿವಾಲ್ವರ್ ಹಾಗೂ 8 ಜೀವಂತಗುಂಡುಗಳನ್ನ ವಶಪಡಿಸಿಕೊಂಡಿದ್ದರು.ಸಧ್ಯ ಈ ಪ್ರಕರಣದಲ್ಲಿ ಜಾವೆದ್ ಆರೋಪಿಯಾಗೇ ಇದ್ದಾನೆ.ಅಲ್ಲದೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 307 ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ. ಸಧ್ಯ ಜಾವೇದ್ ಖಾನ್ ಎನ್.ಆರ್.ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ನಗರಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಪೂವಯ್ಯ ನೇತೃತ್ವದಲ್ಲಿ ಪಿಎಸ್ಸೈ ರಾಜು ಕೊನಕೇರಿ ಹಾಗೂ ಇತರ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *